ಸುಮಲತಾ ನನ್ನ ಸ್ವಂತ ಅಕ್ಕ ಇದ್ದಂತೆ ಎಂದ ಮಾಜಿ ಸಿಎಂ ಹೆಚ್.ಡಿಕೆ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್
kannada t-shirts

ಮಂಡ್ಯ,ಮಾರ್ಚ್,15,2024(www.justkannada.in):  ಮಂಡ್ಯ  ಸಂಸದೆ ಸುಮಲತಾ ಅಂಬರೀಶ್ ಅವರನ್ನ  ಸ್ವಂತ ಅಕ್ಕ ಇದ್ದಂತೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನುಡಿದಿದ್ದಾರೆ.

ಇಂದು ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸುಮಲತಾ ಅಂಬರೀಶ್ ನನ್ನ ಅಕ್ಕ ಇದ್ದಂತೆ. ರಾಜಕೀಯವಾಗಿ ಈ ಹಿಂದೆ ಏನೋ ಆಗಿತ್ತು. ಈಗ ಅದು ಮುಗಿದ ಕಾಲ. ನಾನು  ಸುಮಲತಾ ಅವರ ಜೊತೆ ಸಂಘರ್ಷವನ್ನು ಮುಂದುವರಿಸಲ್ಲ ಎಂದು ಹೇಳಿದ್ದಾರೆ.

ಇನ್ನು ಅಭ್ಯರ್ಥಿ ಘೋಷಣೆ ಮಾಡದ ಬಗ್ಗೆ ಕಾರ್ಯಕರ್ತರಲ್ಲ ಗೊಂದಲವಿದೆ. ಮಂಡ್ಯ ಕ್ಷೇತ್ರ ನಿರ್ಲಕ್ಷ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಹಲವರಲ್ಲಿ ಇದೆ. ಇಂದಿನ ಸಭೆಯಲ್ಲಿ ನಾವು ಸಂದೇಶ ಕೊಡುವುದಕ್ಕಿಂತ ನೀವೇ ಕೊಟ್ಟಿದ್ದೀರಿ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕೆಲವು ಗೊಂದಲ ಇತ್ತು. ಹೀಗಾಗಿ ನಾನೇ ಹಾಸನಕ್ಕೆ ಹೋಗಿ ಅಪಪ್ರಚಾರ ಅಂತ್ಯವಾಡಿದ್ದೇನೆ ಎಂದು ಅವರು ತಿಳಿಸಿದರು.

ಎಚ್ ಡಿ ದೇವೇಗೌಡರಿಗೆ ರಾಜಕೀಯವಾಗಿ ಹಾಸನಕ್ಕಿಂತ ಮಂಡ್ಯ ಹೆಚ್ಚು ಶಕ್ತಿ ನೀಡಿದೆ. ನಾನು ನನ್ನ ಕುಟುಂಬದ ಯಾರು ಯಾರಿಗೂ ದ್ರೋಹ ಮಾಡಿದವರಲ್ಲ. ಬೆಳೆಯುವರನ್ನು ಹಿಂದೆ ನಿಂತು ಶಕ್ತಿ ತುಂಬಿದ್ದೇವೆ. ನಾನು ಅಥವಾ ನಿಖಿಲ್ ಸ್ಪರ್ಧಿಯುಸುವ ನಿಮ್ಮ ಮಾತಿಗೆ ನಮಸ್ಕರಿಸುತ್ತೇನೆ. ನಿಮ್ಮ ಮಾತಿಗೆ ಅಪಚಾರ ಮಾಡಲು ಹೋಗುವುದಿಲ್ಲ ಎಂದು  ಹೆಚ್.ಡಿಕೆ ತಿಳಿಸಿದರು.

Key words: Former CM –HD Kumaraswamy-mandya- Sumalatha -my – sister

website developers in mysore


Previous articleಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆ: ವಿಜೇತರಾದ ಮೈಸೂರಿನ ವಿದ್ಯಾರ್ಥಿಗಳಿಗೆ ಸನ್ಮಾನ.


Font Awesome Icons

Leave a Reply

Your email address will not be published. Required fields are marked *