ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ರೋಗಿಗಳಿಂದ ಹಣಪಡೆದುಕೊಳ್ಳುವ ಮೂಲಕ ಸುಲಿಗೆಗೆ ಇಳಿದಿದ್ದಾರೆ.
ಇಂತಿಂತ ಚಿಕಿತ್ಸೆಗೆ ಇಂತಿಷ್ಟು ಹಣ ಅಂತ ಫಿಕ್ಸ್ ಮಾಡಿ ಲಂಚ ಪಡೆಯುತ್ತಿರುವ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಈಗ ಬಟಾ ಬಯಲಾಗಿದೆ.
ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲವರಿಗೆ 3 ಸಾವಿರ ರೂ. ಸಿಜೇರಿಯನ್ಗೆ 20 ಸಾವಿರ ರೂ. ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ 30 ಸಾವಿರ ರೂ. ಅಂತ ಒಂದೊಂದು ಆಪರೇಷನ್ಗೆ ಒಂದೊಂದ ಹಣ ನಿಗದಿ ಮಾಡಲಾಗಿದೆ.
ಆಶಾ ಕಾರ್ಯಕರ್ತೆಯರು ಆ ಹಣವನ್ನ ಸಂಗ್ರಹಿಸಿ ನರ್ಸ್ಗಳಿಗೆ ಕೊಡ್ಬೇಕಂತೆ. ಬಳಿಕ ವೈದ್ಯಾಧಿಕಾರಿ ರೇಣುಕಾದೇವಿ ಈ ಹಣವನ್ನ ಸಂಗ್ರಹಿಸುತ್ತಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇದೇ ರೀತಿ ರಾಣಿ ಎಂಬ ಆಶಾ ಕಾರ್ಯಕರ್ತೆಗೆ 10 ಸಾವಿರ ರೂ. ಹಣವನ್ನ ಡೆಲವರಿ ರೋಗಿಗಳ ಬಳಿ ವಸೂಲಿ ಮಾಡೋಕೆ ಹೇಳಿದ್ರಂತೆ. ಇದಕ್ಕೊಪ್ಪದೆ ಇದ್ದಿದ್ದಕ್ಕೆ ವೈದ್ಯಾಧಿಕಾರಿ ರೇಣುಕಾದೇವಿ ಇಲ್ಲ ಸಲ್ಲದ ಆರೋಪ ಮಾಡಿ ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಿದ್ದ ಆಶಾ ಕಾರ್ಯಕರ್ತೆ ರಾಣಿ ವಿರುದ್ದ ಮೆಮೋ ನೀಡಿದ್ದಾರೆ. ಅಸಲಿ ಆಶಾ ಕಾರ್ಯಕರ್ತೆಯರು ಸರ್ಕಾರಿ ನೌಕರರಲ್ಲ. ಅವರಿಗೆ ನೋಟಿಸ್ ನೀಡಲು ಕಾನೂನಲ್ಲಿ ಅವಕಾಶವಿಲ್ಲ ಆದರೂ ಸಹ ಮೆಮೋ ನೀಡಿ ಈಗ ವೈದ್ಯಾಧಿಕಾರಿ ರೇಣುಕಾದೇವಿ ಅಡಕತ್ತರಿಗೆ ಸಿಲುಕಿದ್ದಾರೆ.
ಒಂದು ಹೆಜ್ಜೆ ಮುಂದೆ ಹೋಗಿರುವ ಡಾಕ್ಟರ್ ಮೇಡಂ ಜಾತಿ ಅಸ್ತ್ರ ಪ್ರಯೋಗಿಸಿ ಅಟ್ರಾಸಿಟಿ ಕೇಸ್ ಹಾಕಿಸಿ ನಿನ್ನನ್ನ ಒಳಗೆ ಕಳಿಸುತ್ತೇನೆಂದು ಧಮ್ಕಿ ಹಾಕಿದ್ದಾರಂತೆ.