‘ಸೈಂಟ್ ಜೋಸೆಫ್ಸ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಫಿ’ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಣೆ

ಮಂಗಳೂರು: ಜೆಪ್ಪುವಿನ ಸಂತ ಜೋಸೆಫ್ ಗುರುಮಠದಲ್ಲಿ ನಡೆದ ಮಹತ್ವದ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ, ಬೆಂಗಳೂರಿನ ಧರ್ಮಾರಾಂ ವಿದ್ಯಾ ಕ್ಷೇತ್ರದ ವಂದನೀಯ ಡಾ. ಮ್ಯಾಥ್ಯೂ ಅಟ್ಟುಂಕಲ್ ಸಿಎಂ.ಐ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಸಂತ ಜೋಸೆಫ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಫಿಯನ್ನು 2024 ರ ಜನವರಿ 24 ರಂದು ಅಧಿಕೃತವಾಗಿ ತತ್ವಶಾಸ್ತ್ರದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಿಸಲಾಯಿತು.

ವಂದನೀಯ ಡಾ. ಮ್ಯಾಥ್ಯೂ ಮಾತ್ನಾಡುತ್ತಾ “ಈ ಮನ್ನಣೆ ಐದು ವರ್ಷಗಳ ಆವಧಿಗೆ ಪ್ರಾಯೋಗಿಕವಾಗಿರುತ್ತದೆ. ಈ ಸಂಸ್ಥೆಯಿಂದ ಪಡೆದ ಪದವಿ ಪ್ರಮಾಣ ಪತ್ರ ಅಂತರಾಷ್ಟ್ರೀಯ ಮಾನ್ಯತೆ ಹೊಂದಿರುತ್ತದೆ. ಈ ಉನ್ನತ ಶಿಕ್ಷಣದ ಅವಕಾಶ ಕೇವಲ ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ, ಧರ್ಮಭಗಿನಿಯರಿಗೂ ಒಳಗೊಂಡಿದೆ” ಎಂದು ಹೇಳಿದರು.

ಬಿಷಪ್ ಪೀಟರ್ ಅಧಿಕೃತವಾಗಿ ಘೋಷಣೆಯ ಆದೇಶವನ್ನು ಘೋಷಿಸಿದರು. ಸಂಸ್ಥೆಯ ಉನ್ನತ ಶಿಕ್ಷಣದ ಗಮನಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಅವಕಾಶವನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದರು. ವಂ. ಡಾ. ಜಾರ್ಜ್ ಕುಲಂಕರ ಅವರು ಧರ್ಮಾರಾಂ ವಿದ್ಯಾ ಕ್ಷೇತ್ರದ ಅಧ್ಯಾಪಕರನ್ನು ಪರಿಚಯಿಸಿದರು ಮತ್ತು ಸಹಯೋಗಕ್ಕೆ ಒತ್ತು ನೀಡಿದರು.

ತುಳುನಾಡು ಮತ್ತು ಕೆನರಾ ಕ್ರಿಶ್ಚಿಯನ್ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಪ್ರಸ್ತುತಿಯೊಂದಿಗೆ ಸಮಾರಂಭವು ಮುಕ್ತಾಯವಾಯಿತು. ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ರೊನಾಲ್ಡ್ ಸೆರಾವೊ ಅವರು ನೆರೆದಿದ್ದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಮಂಗಳೂರಿನಲ್ಲಿ ಸೈಂಟ್ ಜೋಸೆಫ್ಸ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಫಿ ಉನ್ನತ ಶಿಕ್ಷಣ ಸಂಸ್ಥೆಯಾಗಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದರು ವಂದನೀಯ ಮನೋಜ್ ಮ್ಯಾಥ್ಯೂ ವಂದಿಸಿದರು.

ಸೈಂಟ್ ಜೋಸೆಫ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಫಿಯ ನಿರ್ದೇಶಕರಾದ ವಂದನೀಯ ಡಾ. ಐವನ್ ಡಿಸೋಜಾ ಅವರು ಬಿ.ಪಿ.ಎಚ್ ಪದವಿ ನೀಡುವಲ್ಲಿ, ಸಮರ್ಪಕ ಬೋಧನೆಯನ್ನು ಉತ್ತೇಜಿಸುವಲ್ಲಿ ಮತ್ತು ಸ್ಥಳೀಯ ಸಂಸ್ಕøತಿ ಮತ್ತು ತತ್ತ್ವಶಾಸ್ತ್ರದ ಕಲಿಕೆಯನ್ನು ಉತ್ತೇಜಿಸುವಲ್ಲಿ ಸಂಸ್ಥೆಯ ಮಹತ್ವವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿ ಸೋಜಾ, ನಿವ್ರತ್ತ ಬಿಷಪ್, ವಂದನೀಯ ಡಾ. ಜೋಸೆಫ್ ಮಾರ್ಟಿಸ್, ಧರ್ಮಭಗಿನಿ ಲಿಲ್ಲಿ ಪಿರೇರಾ, ವಂದನೀಯ ಡಾ. ರಾಕಿ ಡಿ’ಕುನ್ಹಾ, ಧಾರ್ಮಿಕ ಸಹೋದರಿಯರು, ಧರ್ಮಗುರುಗಳು ಮತ್ತು ಸಂತ ಜೋಸೆಫ್ ಗುರುಮಠದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *