ಸೈಫರ್ ಪ್ರಕರಣ: ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ಗೆ 10 ವರ್ಷ ಜೈಲು ಶಿಕ್ಷೆ

ಇಸ್ಲಮಾಬಾದ್ : ಸೈಫರ್ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ನಿಕಟವರ್ತಿ ಶಾ ಮಹಮೂದ್ ಖುರೇಷಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಬುಲ್ ಹಸ್ನಾತ್ ಜುಲ್ಕರ್ನೈನ್ ಈ ತೀರ್ಪು ಪ್ರಕಟಿಸಿದರು. ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಇದು ನೆಪಮಾತ್ರದ ಪ್ರಕರಣ ಎಂದು ಹೇಳುವ ಮೂಲಕ ಬೆಳವಣಿಗೆಯನ್ನು ಖಚಿತಪಡಿಸಿದೆ.

ಇಮ್ರಾನ್ ಖಾನ್ ಅವರು ಸೈಫರ್ ಎಂಬ ರಹಸ್ಯ ರಾಜತಾಂತ್ರಿಕ ಕೇಬಲ್ ಅನ್ನು ಬಹಿರಂಗಪಡಿಸಿದಾಗ ಅಧಿಕೃತ ರಹಸ್ಯ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.  ಕಳೆದ ವರ್ಷ ಮಾರ್ಚ್‌ನಲ್ಲಿ ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಇದನ್ನು ಕಳುಹಿಸಿತ್ತು. ಖಾನ್ ನಂತರ ರಾಜತಾಂತ್ರಿಕ ಕೇಬಲ್ ಅನ್ನು ಕಳೆದುಕೊಂಡರು ಎಂದು ವರದಿಯಾಗಿದೆ.

 

Font Awesome Icons

Leave a Reply

Your email address will not be published. Required fields are marked *