ಸೋನಿಯಾ ಗಾಂಧಿಯವರಿಗೂ ಸಿದ್ದರಾಮಯ್ಯ  ಹೀಗೇ ಏಕವಚನದಲ್ಲಿ ಮಾತಾಡಿದ್ದಾರಾ?: ನಾರಾಯಣಸ್ವಾಮಿ 

ಬೆಂಗಳೂರು:  ಚಿತ್ರದುರ್ಗದಲ್ಲಿ ಅಹಿಂದ ಹೆಸರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ರಾಷ್ಟ್ರಪತಿಗಳಿಗೆ ಏಕವಚನ ಪ್ರಯೋಗ ಮಾಡಿದ್ದರು, ಸೋನಿಯಾ ಗಾಂಧಿಯವರಿಗೂ ಸಿದ್ದರಾಮಯ್ಯ  ಹೀಗೇ ಏಕವಚನದಲ್ಲಿ ಮಾತಾಡಿದ್ದಾರಾ? ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಹಾಗೂ ಖರ್ಗೆಯವರಿಗೂ ಇವರು, ಇವನು, ಅವನು ಎಂದು ಏಕವಚನದಲ್ಲಿ ಕರೆಯುತ್ತಾರಾ? ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ  ಕಿಡಿಕಾರಿದ್ದಾರೆ.

ನಗರದ ಬಿಜೆಪಿ  ಕಚೇರಿಯಲ್ಲಿ ಮಾತನಾಡಿದ ಅವರು, ಒಬ್ಬ ದಲಿತ ಹೆಣ್ಣು ಮಗಳಾಗಿರುವ ರಾಷ್ಟ್ರಪತಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿರೋದು ಖಂಡನೀಯ. ಹಳ್ಳಿಗಳಲ್ಲಿ ಹಾಗೇ ಕರೆಯೋದು ಎಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಮೂಲಕ ಹಳ್ಳಿ ಜನರನ್ನೂ ಸಿಎಂ ಅಪಮಾನ ಮಾಡಿದ್ದಾರೆ. ಹಳ್ಳಿ ಜನರು ಎಲ್ಲರನ್ನೂ ಗೌರವದಿಂದ ಮಾತಾಡಿಸುತ್ತಾರೆ. ಸಿದ್ದರಾಮಯ್ಯ ಯಾಕೆ ಇಷ್ಟು ಸುಳ್ಳು ಹೇಳುತ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ, ಅಹಂಕಾರ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ.

ರಾಷ್ಟ್ರಪತಿಗಳ ಬಣ್ಣದ ಬಗ್ಗೆಯೂ ಸಿದ್ದರಾಮಯ್ಯನವರು ಈ ಹಿಂದೆ ಕಾಮೆಂಟ್ ಮಾಡಿದ್ದರು. ನೀವು ಭಾಷೆ ಸರಿಪಡಿಸಿಕೊಳ್ಳಲು ಒಬ್ಬ ಟೀಚರ್‍ನ ನೇಮಿಸಿಕೊಳ್ಳಿ. ನಾನೇ ಬೇಕಾದ್ರೆ ನಿಮಗೆ ಟೀಚರ್ ಆಗಿ ಬಂದು ಭಾಷೆ ಬಳಕೆ ಹೇಳಿಕೊಡುತ್ತೇನೆ ಎಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *