ತಿರುವನಂತಪುರ: ತಮಿಳಿನ ಜನಪ್ರಿಯ ನಟಿ ಅರುಂಧತಿ ನಾಯರ್‌ಗೆ ರಸ್ತೆ ಅಪಘಾತಕ್ಕೀಡಾಗಿ ನಟಿಗೆ ಗಂಭೀರ ಗಾಯಗಳಾಗಿದ್ದು, ತಿರುವನಂತಪುರನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೈಕ್‌ನಲ್ಲಿ ತನ್ನ ಸಹೋದರನ ಜೊತೆ ಅರುಂಧತಿ ಹೋಗುತ್ತಿದ್ದಾಗ, ಕೋವಲಂ ಬೈಪಾಸ್ ಬಳಿ ಕಾರು ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಇಬ್ಬರೂ ಗಂಭೀರ ಗಾಯಗಳಾಗಿ ವೈಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಜಯ್ ಆಂಟೋನಿ ಜೊತೆ ಸೈತಾನ್ ಸೇರಿದಂತೆ ತಮಿಳಿನ ಹಲವು ಸಿನಿಮಾಗಳಲ್ಲಿ ಅರುಂಧತಿ ನಾಯರ್ ನಟಿಸಿದ್ದಾರೆ.
ಅರುಂಧತಿ ನಾಯರ್ ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಬಗ್ಗೆ ತಿಳಿಸಿ ಚಿಕಿತ್ಸೆಗೆ ನೆರವಾಗಲು ಸೋಷಿಯಲ್ ಮೀಡಿಯಾದಲ್ಲಿ ನಟಿ ಗೋಪಿಕಾ ಅನಿಲ್ ಮನವಿ ಮಾಡಿದ್ದಾರೆ. ನನ್ನ ಸ್ನೇಹಿತೆ ಆಕ್ಸಿಡೆಂಟ್ ಆಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಆಕೆ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆಕೆಯ ಪ್ರತಿನಿತ್ಯದ ಚಿಕಿತ್ಸೆ ವೆಚ್ಚ ಭರಿಸಲು ಅವರ ಕುಟುಂಬದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.