ಸ್ವಾರ್ಥಕ್ಕೆ ಮರ ಕಡಿದರೆ ಶಿಕ್ಷೆ: ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ

ಬೀದರ್ : ‘ಬೇಲೂರು ತಾಲ್ಲೂಕಿನ ನಂದಗೋಡನ ಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಇದರಲ್ಲಿ 60 ಬೃಹತ್‌ ಹಳೆಯ ಮರಗಳೂ ಸೇರಿವೆ. ಈ ರೀತಿ ಸ್ವಾರ್ಥಕ್ಕೆ ಯಾರೇ ಮರ ಕಡಿದರೆ ಅಪರಾಧ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ವೃಕ್ಷ ಸಂರಕ್ಷಣಾ ಕಾಯ್ದೆಯಡಿ ಸರ್ಕಾರಿ ಜಾಗದಲ್ಲಿಯೇ ಆಗಲಿ, ಪಟ್ಟಾ ಜಮೀನಿನಲ್ಲೇ ಆಗಲಿ ಅನುಮತಿ ಪಡೆಯದೆ ಅಕ್ರಮವಾಗಿ ಮರ ಕಡಿಯುವುದು ಅಪರಾಧ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ವಿಕ್ರಂ ಸಿಂಹ ಎಂಬುವವರು ಶುಂಠಿ ಬೆಳೆಯಲು ಸದರಿ ಪ್ರಶ್ನಿತ ಜಮೀನಿನ ಕರಾರು ಮಾಡಿಕೊಂಡಿದ್ದಾರೆ. ಅವರನ್ನು ವಶಕ್ಕೆ ಪಡೆದು ಪ್ರಶ್ನಿಸುವುದು ಅಗತ್ಯವೆಂದು ಮನಗಂಡು ತನಿಖಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ತಹಶೀಲ್ದಾರ್ ಅವರು ಬೆಳಕಿಗೆ ತಂದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡು ಬಂದಿದೆ. ತಕ್ಷಣ ಕ್ರಮ ವಹಿಸದೆ ಲೋಪ ಎಸಗಿದ ಆರೋಪದಡಿ ಈಗಾಗಲೇ ಐದು ಜನ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *