ಹಡಗಿನಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯರ ಸೇರಿ 21 ಮಂದಿ ರಕ್ಷಣೆ

ದೆಹಲಿ : ಸೊಮಾಲಿಯಾದಲ್ಲಿ  ಅಪಹರಣಕ್ಕೊಳಗಾಗಿದ್ದ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ಶುಕ್ರವಾರ ಸಂಜೆ ರಕ್ಷಿಸಿದೆ. ಹಡಗಿನಿಂದ SOS ಕರೆ ಬಂದ ಕೂಡಲೇ ನೌಕಾಪಡೆಯು ಯುದ್ಧನೌಕೆ, ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಪ್ರಿಡೇಟರ್ MQ9B ಡ್ರೋನ್‌ಗಳನ್ನು ನಿಯೋಜಿಸಿತು. 84,000 ಟನ್ ಬಲ್ಕ್ ಕ್ಯಾರಿಯರ್‌ನಲ್ಲಿ 15 ಭಾರತೀಯರು ಸೇರಿದಂತೆ 21 ಸದಸ್ಯರಿದ್ದರು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.

ನಿನ್ನೆಯಷ್ಟೇ ಲೈಬೀರಿಯಾ ಧ್ವಜವಿದ್ದ ಎಂವಿ ಲೀಲಾ ನಾರ್ಪೋಕ್ ಎಂಬ ಹೆಸರಿನ ಹಡಗನ್ನ ಶಸ್ತ್ರಸಜ್ಜಿತ ಕಡಲ್ಗಳ್ಳರು ಅಪಹರಿಸಿದ್ದರು. ಈ ಹಡಗಿನಲ್ಲಿ 6 ಸಿಬ್ಬಂದಿ ಸೇರಿ 15 ಮಂದಿ ಭಾರತೀಯರಿದ್ದರು. ಭಾರತೀಯ ನೌಕಾಪಡೆ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

Font Awesome Icons

Leave a Reply

Your email address will not be published. Required fields are marked *