ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆಗೆ ಅಸ್ತು: ತಂಗಡಗಿ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿಯನ್ನು ಫೆ.೧೫ರ ವರೆಗೆ ವಿಸ್ತರಿಸಲು ಆದೇಶಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದು, ಜಾತಿ ಗಣತಿಯ ವರದಿ ಇನ್ನು ೧೫ ದಿನಗಳಲ್ಲಿ ಸರ್ಕಾರದ ಕೈಸೇರುವ ಸಾಧ್ಯತೆಯಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ತಂಗಡಗಿ, ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಫೆಬ್ರವರಿ 15ರ ತನಕ ಅವಧಿ ವಿಸ್ತರಣೆಗೆ ಮಾಡಿದ್ದ ಮನವಿಯನ್ನು ಸ್ವೀಕರಿಸಿ ಸಹಿ ಮಾಡಿ ಕಳಿಸಲಾಗಿದೆ ಎಂದರು.

ಕಳೆದ ನವೆಂಬರ್ ನಲ್ಲಿ ಮುಕ್ತಾಯವಾಗಬೇಕಿದ್ದ ಅಧಿಕಾರಾವಧಿಯನ್ನು ಎರಡು ತಿಂಗಳು ವಿಸ್ತರಣೆ ಮಾಡಲಾಗಿತ್ತು. ಅದರಂತೆ ಆಯೋಗದ ಅಧ್ಯಕ್ಷ ಹಾಗೂ ಐವರು ಸದಸ್ಯರ ಅಧಿಕಾರವನ್ನು ೨೦೨೪ರ ಜ.೩೧ರ ತನಕ ಮುಂದೂಡಲಾಗಿತ್ತು.

ಜಾತಿಗಣತಿಯ ವರದಿಗೆ ಪ್ರಮುಖ ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಕೂಡ ಅದೇ ನಿಲುವನ್ನು ತಾಳಿದ್ದಾರೆ. ಆದರೆ ಇದರ ಬಗ್ಗೆ ಆಸಕ್ತಿ ತೋರಿಸುತ್ತಿರುವ ಸಿಎಂ, ವರದಿಯನ್ನು ಸ್ವೀಕರಿಸುತ್ತೇವೆ ಎಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *