ಹಿಂದೂ ದೇವರನ್ನು ನಂಬಬೇಡಿ ಎಂದು ಪ್ರತಿಜ್ಞೆ ಮಾಡಿಸಿದ್ದ ಶಿಕ್ಷಕ !

ರಾಯ್ಪುರ್:‌ ಹಿಂದೂ ದೇವರನ್ನು ನಂಬಬೇಡಿ, ಬೌದ್ಧ ಧರ್ಮ ಅಳವಡಿಸಿಕೊಳ್ಳಿ ಅಂತ ಶಿಕ್ಷಕರೊಬ್ಬರು ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದ ಘಟನೆ ಛತ್ತೀಸ್‍ಘಡದ ಬಿಲಾಸ್‍ಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಶಿಕ್ಷಕ ರತನ್‍ಲಾಲ್ ಸರೋವರ್ ರನ್ನು ಬಂಧಿಸಲಾಗಿದೆ. ಮುಖ್ಯ ಶಿಕ್ಷಕನ ಸ್ಥಾನದಿಂದಲೂ ಅಮಾನತುಗೊಳಿಸಲಾಗಿದೆ.

ಹೌದು. . . ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಆರೋಪಿ ಮುಖ್ಯಸ್ಥರು ಮೊಹ್ತರಾಯ್ ಗ್ರಾಮದಲ್ಲಿ ಮಕ್ಕಳು ಮತ್ತು ಜನರ ಗುಂಪನ್ನು ಒಟ್ಟುಗೂಡಿಸಿದ್ದಾರೆ. ಬಳಿಕ ಅವರಿಗೆ ಹಿಂದೂ ದೇವರುಗಳನ್ನು ನಾವು ಪೂಜಿಸುವುದಿಲ್ಲ. ಬೌದ್ಧ ಧರ್ಮವನ್ನು ಅನುಸರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು.

ಈ ಸಂಬಂಧ ಹಿಂದೂ ಸಂಘಟನೆಯೊಂದರ ಪದಾಧಿಕಾರಿ ರೂಪೇಶ್ ಶುಕ್ಲಾ ಎಂಬವರು ಹೆಡ್ ಮಾಸ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗತೊಡಗಿತು. ಸದ್ಯ ದೂರಿನ ಆಧಾರದ ಮೇಲೆ ಹೆಡ್‌ಮಾಸ್ಟರ್ ವಿರುದ್ಧ ಐಪಿಸಿ ಸೆಕ್ಷನ್ 153A ಮತ್ತು 295A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌

Font Awesome Icons

Leave a Reply

Your email address will not be published. Required fields are marked *