ಹಿರಿಯ ಕಿರುತೆರೆ ನಟಿ ಭೈರವಿ ವೈದ್ಯ ನಿಧನ

ಬಾಲಿವುಡ್​ ನಟಿ, ಟಿವಿ ಆ್ಯಕ್ಟರ್ಸ್​ ಭೈರವಿ ವೈದ್ಯ (67) ನಿಧನರಾಗಿದ್ದಾರೆ. ಕೆಲವು ವರದಿಗಳ ಪ್ರಕಾರ ಹಲವು ತಿಂಗಳುಗಳಿಂದ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಸುಮಾರು 6 ತಿಂಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಭೈರವಿ ವೈದ್ಯ ಅವರು ಸುಮಾರು 45 ವರ್ಷಗಳಿಂದ ನಟನಾ ವೃತ್ತಿಯಲ್ಲಿ ಬ್ಯುಸಿ ಆಗಿದ್ದರು. ಅಕ್ಷಯ್ ಕುಮಾರ್, ಐಶ್ವರ್ಯ ರೈ, ಅನಿಲ್ ಕಪೂರ್ ಅಭಿನಿಯದ ತಾಲ್ ಚಿತ್ರವು ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು.

ಅಮ್ಮನ ನಿಧನದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿರುವ ಜಂಕಿ, ಮಾ, ಮಾಮ್, ಮಮ್ಮಿ, ಛೋಟಿ, ಭೈರವಿ ಒಬ್ಬ ಕಲರ್​​ಫುಲ್, ನಿರ್ಭೀತ, ಸೃಜನಶೀಲ, ಕಾಳಜಿಯುಳ್ಳ, ಜವಾಬ್ದಾರಿ ವ್ಯಕ್ತಿತ್ವ ಇದ್ದವಳು. ಅಪ್ಪನಿಗೆ ಹೆಂಡತಿ, ಮಕ್ಕಳಿಗೆ ಪೋಷಕರಾಗುವ ಮೊದಲು ಆಕೆ ನಟಿ. ಸಿನಿಮಾ, ಟಿವಿ, ಒಟಿಟಿ ಅನ್ನೋದಕ್ಕಿಂತ ಇಂಡಸ್ಟ್ರಿಯಲ್ಲಿ ಕೆಲಸದ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಂಡಿರಲಿಲ್ಲ. ಅಮ್ಮಾ ಶಾಂತವಾಗಿರಿ. ನಾನು ಒಳ್ಳೆಯ ಮಗುವಾಗಿ ಇರುತ್ತೇನೆ ಎಂದು ಭರವಸೆ ನೀಡ್ತೇನೆ ಎಂದು ಬರೆದುಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *