ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ ಶಿವಣ್ಣ ದಂಪತಿ

 

ಬೆಂಗಳೂರು: ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ನೆಲೆಸಿರುವ ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ.

ಹೀಗಾಗಿ ಲೀಲಾವತಿಯವರ ಆರೋಗ್ಯ ವಿಚಾರಿಸಲು ಸ್ಯಾಂಡಲ್​​ವುಡ್​ ನಟ ಹಾಗೂ ನಟಿಯರು, ಗಣ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.

ಇಂದು ಸ್ಯಾಂಡಲ್​​ವುಡ್​ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ದಂಪತಿ ಭೇಟಿ ಕೊಟ್ಟಿದ್ದಾರೆ. ಇನ್ನು, ಇದೇ ವೇಳೆ ಮಾತಾಡಿದ ಶಿವಣ್ಣ ʼನನ್ನ ಧ್ವನಿ ಕಂಡು ಹಿಡಿದರು. ಆ ವಯಸ್ಸಿನಲ್ಲೂ ತಾಳುವಂತ ಶಕ್ತಿ ಇದೆ ಅವರಿಗೆ. ಯೋಗ ಪುರುಷರು ಅವರು. ಒಳ್ಳೆಯ ಮನಸ್ಸಿದೆ. ಒಳ್ಳೆಯ ಆತ್ಮೀಯತೆ, ಪ್ರೀತಿ, ಆಶೀರ್ವಾದ ಇದೆ. ತುಂಬಾ ಪ್ರೀತಿ ಇದೆ.

ಲೀಲಾವತಿ ಅವರನ್ನು ನೋಡಿದ್ರೆ ನನ್ನ ತಾಯಿ ನೋಡಿದಂತೆ ಆಗುತ್ತದೆ. ಇನ್ನೂ ಇರಬೇಕು ಅವರು. ನೋವಾಗುತ್ತದೆ ತಡೆದುಕೊಳ್ಳಬೇಕು ಎಂದು ಇದೇ ವೇಳೆ ವಿನೋದ್ ರಾಜ್ ಅವರ ಕೈ ಹಿಡಿದು ತಬ್ಬಿಕೊಂಡ ಧೈರ್ಯವಾಗಿ ಇರು ಎಂದಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೇ ಹಿರಿಯ ನಟಿ ಲೀಲಾವತಿ ಮನೆಗೆ ನಟ ದರ್ಶನ್​​, ಬಹುಭಾಷಾ ನಟ ಅರ್ಜುನ್​ ಸರ್ಜಾ ಭೇಟಿ ನೀಡಿ ಲೀಲಾವತಿಯವರ ಆರೋಗ್ಯ ವಿಚಾರಿಸಿದ್ದರು.

Also Try : Red sauce pasta recipe रेस्टोरेंट जैसी हर स्टेप इमेज के साथ

Font Awesome Icons

Leave a Reply

Your email address will not be published. Required fields are marked *