ಹಿರಿಯ ಪತ್ರಕರ್ತ ರಾಮಚಂದ್ರ ಮನಗೂಳಿ ನಿಧನ

ಬಾಗಲಕೋಟೆ: ಹಿರಿಯ ಪತ್ರಕರ್ತ ರಾಮಚಂದ್ರ ಮನಗೂಳಿ ಅವರು ನಿಧನರಾಗಿದ್ದಾರೆ. 64 ವರ್ಷದ ರಾಮಚಂದ್ರ ಮನಗೂಳಿ ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು(ಮಾ.01) ಬೆಳಗ್ಗೆ ಹಿರಿಯ ಪತ್ರಕರ್ತರು ವಿಧಿವಶರಾಗಿದ್ದಾರೆ.

ರಾಮಚಂದ್ರ ಮನಗೂಳಿ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಅಪಾರ ಸೇವೆಯಿಂದ ಎಲ್ಲರಿಗೂ ರಾಮ್ ಮನಗೂಳಿ ಎಂದೇ ಚಿರಪರಿಚಿತರಾಗಿದ್ದರು. ಕಳೆದ 45 ವರ್ಷಗಳಿಂದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರರಾಗಿ, ಬ್ಯೂರೋ ಚೀಫ್ ಆಗಿ ರಾಮ್‌ ಮನಗೂಳಿ ಅವರು ಸೇವೆ ಸಲ್ಲಿಸಿದ್ದಾರೆ. ಹಿರಿಯ ಪತ್ರಕರ್ತರ ಅಗಲಿಕೆಗೆ ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *