ಹೆಚ್‌ಪಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಚಾಲಿತ ಲ್ಯಾಪ್‌ಟಾಪ್ ಬಿಡುಗಡೆ

ಬೆಂಗಳೂರು: ಭಾರತದ ಗೇಮರ್ಸ್ ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ಹೆಚ್‌ಪಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಲಿತ ಲ್ಯಾಪ್ ಟಾಪ್ ಬಿಡುಗಡೆ ಮಾಡಿದೆ. ಒಮೆನ್ ಟ್ರಾನ್ಸೆಂಡ್ 14 ಮತ್ತು ಎಚ್ ಪಿ x360 14 ಎಂಬ ಎರಡೂ ಲ್ಯಾಪ್ ಟಾಪ್ ಸೀರೀಸ್ ಗಳು ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಗಳಿಂದ ಸುಸಜ್ಜಿತವಾಗಿದೆ. ಬಳಕೆದಾರರಿಗೆ ಹೈ-ಎಂಡ್ ಗೇಮಿಂಗ್ ಮತ್ತು ಕ್ರಿಯೇಶನ್ ಅನುಭವವನ್ನು ನೀಡಲಿದೆ.

ಒಮೆನ್ ಟ್ರಾನ್ಸೆಂಡ್ 14 ಎಲ್ಲಾ ಹೆಚ್‌ಪಿ ಸ್ಟೋರ್ ಗಳು ಮತ್ತು ಹೆಚ್‌ಪಿ ಆನ್ ಲೈನ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಸೆರಾಮಿಕ್ ವೈಟ್ ಮತ್ತು ಶಾಡೋ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದ್ದು, ಇವುಗಳ ಬೆಲೆ 1,74,999 ರೂಪಾಯಿಗಳಿಂದ ಆರಂಭವಾಗಲಿದೆ.

ಹೆಚ್‌ಪಿ ಎನ್ವಿ x360 14 ಎಲ್ಲಾ ಹೆಚ್‌ಪಿ ಸ್ಟೋರ್ ಗಳು ಮತ್ತು ಎಚ್ ಪಿ ಆನ್ ಲೈನ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಮೆಟೀರಿಯರ್ ಸಿಲ್ವರ್ ಮತ್ತು ಅಟ್ಮೋಸ್ಫೆರಿಕ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು, ಇವುಗಳ ಬೆಲೆ 99,999 ರೂಪಾಯಿಗಳಿಂದ ಆರಂಭವಾಗಲಿದೆ.

ಎಚ್ ಪಿಯಲ್ಲಿ ಎಐ ಚಾಲಿತ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಗ್ರಾಹಕರು ಅಥವಾ ಬಳಕೆದಾರರಿಗೆ ಅವರ ಕೆಲಸಕ್ಕೆ ವೇಗ ತುಂಬುವುದು, ಲೈವ್ ಮತ್ತು ಆಟವಾಡಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಎಚ್ ಪಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ಇಪ್ಸಿತಾ ದಾಸಗುಪ್ತಾ ಹೇಳಿದ್ದಾರೆ.

ನಾವೀಗ ಉದ್ಯಮದ ದೊಡ್ಡದಾದ ಎಐ-ಚಾಲಿತ ಪಿಸಿಗಳ ಪೋರ್ಟ್ ಫೋಲಿಯೋವನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ಎಐ-ಚಾಲಿತ ವೈಯಕ್ತೀಕರಣದ ಮೂಲಕ ನಾವು ಇನ್ನೂ ಹೆಚ್ಚಿನ ವೈಯಕ್ತೀಕೃತ ಮತ್ತು ಅರ್ಥಪೂರ್ಣವಾದ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತಿದ್ದೇವೆ ಎಂದರು.

ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಷನ್ ಎರಡರಲ್ಲೂ ಪಾಲ್ಗೊಳ್ಳಲು ಗೇಮರ್ ಗಳಿಗಾಗಿ ಈ ಲ್ಯಾಪ್ ಟಾಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಒಮೆನ್ ಟ್ರಾನ್ಸೆಂಡ್ 14 NVIDIA® GeForce® RTX™ 4060 ಗ್ರಾಫಿಕ್ಸ್ ನೊಂದಿಗೆ ಇದನ್ನು ಉನ್ನತೀಕರಿಸಲಾಗಿದೆ. ಇದು ವೇಗವರ್ಧಿತ ಗೇಮ್ ನ ಅನುಭವ ಮತ್ತು ಹೆಚ್ಚು ವೇಗದಲ್ಲಿ ಗ್ರಾಫಿಕ್ ರಚನೆಗಾಗಿ ಎಐ ವೈಶಿಷ್ಟ್ಯತೆಗಳ ಶಕ್ತಿಯನ್ನು ತುಂಬುತ್ತದೆ.

ಶಕ್ತಿಶಾಲಿಯಾದ ಒಮೆನ್ ಟ್ರಾನ್ಸೆಂಡ್ 14 ಎಚ್ ಪಿಯ ಅತ್ಯಂತ ಹಗುರವಾದ ಲ್ಯಾಪ್ ಟಾಪ್ ಕೂಡ ಆಗಿದೆ. ಈ ಡಿವೈಸ್ ನ ತೂಕ 1.637 ಕೆಜಿ ಇದ್ದು, ಇದರ ಬ್ಯಾಟರಿ ಕಾರ್ಯಕ್ಷಮತೆಯು 11.5 ಗಂಟೆಯವರೆಗೆ ಇರುತ್ತದೆ. ಟೈಪ್ –ಸಿ ಪಿಡಿ 140W ಅಡಾಪ್ಟರ್ ಇದ್ದು, ಈ ಹಿಂದಿಗಿಂತಲೂ ಕ್ಷಿಪ್ರವಾಗಿ ಚಾರ್ಜ್ ಆಗಲು ನೆರವಾಗುತ್ತದೆ.

ಈ ಎಚ್ ಪಿ ಎನ್ವಿ x360 14 ಲ್ಯಾಪ್ ಟಾಪ್ ಗಳು ಅತ್ಯುತ್ತಮ ವಿಡಿಯೋ ವೈಶಿಷ್ಟ್ಯತೆಗಳಿಗಾಗಿ ವಿಂಡೋಸ್ ಸ್ಟುಡಿಯೋ ಎಫೆಕ್ಟ್ ನಿಂದ ಸುಸಜ್ಜಿತವಾಗಿವೆ. NPU ನಿಂದ ಸಕ್ರಿಯಗೊಳಿಸಲಾಗಿದ್ದು, ವಿಂಡೋಸ್ ಸ್ಟುಡಿಯೋ ಪರಿಣಾಮಗಳು ಎಐ-ಆಧಾರಿತ ವೈಶಿಷ್ಟ್ಯತೆಗಳನ್ನು ಒದಗಿಸುತ್ತವೆ.

 

 

Font Awesome Icons

Leave a Reply

Your email address will not be published. Required fields are marked *