ಹೊಸದಿಲ್ಲಿ: ಹೊಸ ಸಾಹಸಕ್ಕೆ ಮುಂದಾದ ಇಸ್ರೊ

ಹೊಸದಿಲ್ಲಿ: ಈ ವರ್ಷ ಇಸ್ರೊ ಹಲವು ಸಾಧನೆಗಳನ್ನು ಮಾಡಿ ಜಗಮನ್ನಣೆ ಗಳಿಸಿದೆ. ಅದೇರೀತಿ ಹೊಸ ವರ್ಷದ ಆರಂಭದಂದೇ ಮತ್ತೊಂದು ಮೈಲುಗಲ್ಲು ಸಾಧನೆಗೆ ಸಜ್ಜಾಗಿದೆ. ಕಪ್ಪು ಕುಳಿಗಳ ಅಧ್ಯಯನಕ್ಕಾಗಿ 2024ರ ಜ. 1ರಂದು ದೇಶದ ಮೊದಲ ‘ಎಕ್ಸ್‌-ರೇ ಪೋಲಾರಿಮೀಟರಿ ಉಪಗ್ರಹ’ವನ್ನು (ಎಕ್ಸ್‌ಪೋ ಸ್ಯಾಟ್‌) ಇಸ್ರೋ ಉಡ್ಡಯನ ಮಾಡಲಿದೆ.

ಪ್ರಬಲ ಕ್ಷ ಕಿರಣಗಳ ಮೂಲಗಳ ಧ್ರುವೀಕರಣವನ್ನು ಅಧ್ಯಯನ ಮಾಡಲು ‘ಎಕ್ಸ್‌ಪೋಸ್ಯಾಟ್‌’ ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯೊಂದಿಗೆ ಬಾಹ್ಯಾಕಾಶ ಆಧಾರಿತ ‘ಪೋಲಾರಿಮೆಟ್ರಿ’ಯಲ್ಲಿ ಭಾರತ ಮುಂಚೂಣಿ ಸ್ಥಾನ ಪಡೆಯಲಿದೆ.

2021ರಲ್ಲಿ ‘ಇಮೇಜಿಂಗ್‌ ಎಕ್ಸ್‌-ರೇ ಪೋಲಾರಿಮೆಟ್ರಿ ಎಕ್ಸ್‌ಪ್ಲೋರರ್‌ (ಐಎಕ್ಸ್‌ಪಿಇ) ಹೆಸರಿನ ಇಂಥದ್ದೇ ಉಪಗ್ರಹವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಉಡ್ಡಯನ ಮಾಡಿತ್ತು. ಆ ಮೂಲಕ ಇಂತಹ ಸಾಧನೆ ಮಾಡಿದ ಮೊದಲ ರಾಷ್ಟ್ರವೆನಿಸಿತ್ತು. ಭಾರತ ಈ ಪಟ್ಟಿಯಲ್ಲಿ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.

ಎಕ್ಸ್‌ಪೋಸ್ಯಾಟ್‌’ ಉಪಗ್ರಹವು ಕಪ್ಪು ಕುಳಿ, ಎಕ್ಸ್‌-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿ ನ್ಯೂಕ್ಲಿಯಸ್‌ಗಳು, ನ್ಯೂಟ್ರಾನ್‌ ನಕ್ಷತ್ರಗಳು ಮತ್ತು ಉಷ್ಣವಲ್ಲದ ಸೂಪರ್ನೋವಾ ಅವಶೇಷಗಳು ಸೇರಿದಂತೆ ಬ್ರಹ್ಮಾಂಡದ 50 ಪ್ರಕಾಶಮಾನವಾದ ಮೂಲಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಈ ಉಪಗ್ರಹವನ್ನು 500- 700 ಕಿ.ಮೀ ಉದ್ದದ ವೃತ್ತಾಕಾರದ ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸಲಾಗುವುದು. ಇದರ ಜೀವಿತವಾವಧಿ ಕನಿಷ್ಠ ಐದು ವರ್ಷ ಎಂದು ಇಸ್ರೋ ತಿಳಿಸಿದೆ.

Font Awesome Icons

Leave a Reply

Your email address will not be published. Required fields are marked *