ಹೊಸ ಗುಟ್ಕಾ ಜಾಹೀರಾತಿನ ಬಗ್ಗೆ ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್

ಮುಂಬೈ: ನಟ ಅಕ್ಷಯ್ ಕುಮಾರ್ ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಕಳೆದೆರಡು ದಿನಗಳಹಿಂದೆ ಅಕ್ಷಯ್ ಕುಮಾರ್ ಅವರ ಹೊಸ ವಿಮಲ್ ಜಾಹೀರಾತು ಪ್ರಸಾರ ಕಂಡಿತ್ತು. ಅಕ್ಷಯ್ ಹೊಸ ಜಾಹೀರಾತಿನಲ್ಲಿ ಭಾಗಿ ಆಗಿದ್ದಾರೆ ಎಂದೇ ಎಲ್ಲ ಕಡೆಗಳಲ್ಲೂ ಸುದ್ದಿ ಆಯಿತು. ಈ ಕುರಿತು ಅಕ್ಷಯ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

‘ಈ ಜಾಹೀರಾತು ಶೂಟ್ ಆಗಿದ್ದು 2021ರ ಅಕ್ಟೋಬರ್ 13ರಂದು. ನನಗೂ ಆ ಬ್ರ್ಯಾಂಡ್​ಗೂ ಯಾವುದೇ ಸಂಬಂಧ ಇಲ್ಲ. ಈಗಾಗಲೇ ಶೂಟ್ ಮಾಡಿಕೊಂಡಿರುವ ಜಾಹೀರಾತನ್ನು ಮುಂದಿನ ತಿಂಗಳ ಕೊನೆಯವರೆಗೆ ಪ್ರಸಾರ ಮಾಡುವ ಹಕ್ಕು ಅವರಿಗೆ ಇದೆ’ ಎಂದಿದ್ದಾರೆ. ಈ ಮೂಲಕ ಇದು ಹಳೆಯ ಜಾಹೀರಾತು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ಅಕ್ಷಯ್ ಕುಮಾರ್ ಅವರು ‘ವಿಮಲ್ ಪಾನ್ ಮಸಾಲ’ದ ರಾಯಭಾರಿ ಆದ ಬಳಿಕ ಅವರ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಕ್ಷಮೆ ಕೇಳಿದ್ದ ಅವರು ರಾಯಭಾರತ್ವ ತೊರೆದಿದ್ದರು. ಜೊತೆಗೆ ಒಪ್ಪಂದ ಮುಗಿಯುವವರೆಗೆ ಶೂಟ್ ಮಾಡಿಕೊಂಡಿದ್ದ ಜಾಹೀರಾತನ್ನು ಪ್ರಸಾರ ಆಗಲಿದೆ ಎಂದು ಹೇಳಿದ್ದರು. ಇತ್ತೀಚೆಗೆ ವಿಮಲ್​ನ ಹೊಸ ಜಾಹೀರಾತು ಪ್ರಸಾರ ಕಂಡಿತ್ತು. ಇದರಲ್ಲಿ ಅಕ್ಷಯ್ ಕೂಡ ಕಾಣಿಸಿಕೊಂಡಿದ್ದರು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *