‘ಹ್ಯಾರಿ ಪಾಟರ್’ ಖ್ಯಾತಿಯ ನಟ ಸರ್ ಮೈಕೆಲ್ ಗ್ಯಾಂಬೊನ್ ನಿಧನ

ಲಂಡನ್: ಹ್ಯಾರಿ ಪ್ಯಾಟರ್, ಸಿಂಗಿಂಗ್ ಡಿಟೇಕ್ಟಿವ್ ಚಿತ್ರಗಳ ಖ್ಯಾತ ನಟ, ಸರ್ ಮೈಕೆಲ್ ಗ್ಯಾಂಬೊನ್ ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬವು ತಿಳಿಸಿದೆ. ಅವರಿಗೆ 82 ವಯಸ್ಸಾಗಿತ್ತು. ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದರು.

ʼಹ್ಯಾರಿ ಪಾಟರ್‌’ ಸರಣಿಯ 6 ಚಿತ್ರಗಳಲ್ಲಿ ಪ್ರೊಫೆಸರ್ ಅಲ್ಬುಸ್ ಡಂಬಲ್ಡೋರ್ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಫಂಟಾಸ್ಟಿಕ್ ಮಿ. ಫಾಕ್ಸ್‌ ಹಾಗೂ ಸಿಂಗಿಂಗ್ ಡಿಟೇಕ್ಟಿವ್ ಚಿತ್ರಗಳು ಕೂಡ ಅವರಿಗೆ ಹೆಸರು ತಂದು ಕೊಟ್ಟಿದ್ದವು.

ನಾಟಕರಂಗದಲ್ಲಿ ಪ್ರಖ್ಯಾತರಾಗಿದ್ದ ಗ್ಯಾಂಬೊನ್ ಅವರು 1965 ಒಥೆಲ್ಲೋ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಸುಮಾರು 60 ವರ್ಷಗಳ ನಟನಾ ವೃತ್ತಿಯಲ್ಲಿ ಅವರು ಮೂರು ಬಾರಿ ಆಲಿವಿಯರ್ ಅವಾರ್ಡ್ಸ್, ಎರಡು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅವಾರ್ಡ್ಸ್, ನಾಲ್ಕು ಬಾಫ್ತಾ ಅವಾರ್ಡ್ಸ್ ಪಡೆದುಕೊಂಡಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *