ಅನ್ಯಕೋಮಿನ ಯುವಕರ ಬೆದರಿಕೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ಇಂದು ಎಲ್ಲೆಡೆ ರಾಮನವಮಿ ಹಬ್ಬದ ಸಂಭ್ರಮ, ಶ್ರೀರಾಮ ಹುಟ್ಟಿದ ದಿನವಾದ ಇಂದು(ಏ.17) ನಾಡಿನೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದರಂತೆ ರಾಮನವಮಿ ಮುಗಿಸಿ ಬರುತ್ತಿದ್ದ ವಾಹನವನ್ನು ಅಡ್ಡಹಾಕುವುದಲ್ಲದೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ.ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ನಡೆದಿದೆ.

ಇಬ್ಬರು ಮುಸ್ಲಿಂ ಯುವಕರು ‘ಕಾರಿನ ಬಳಿ ಬಂದು ಜೈ ಶ್ರೀರಾಮ್ ಎಂದು ಹೇಳಬೇಕಾ, ಜೈ ಶ್ರೀ ರಾಮ್ ಇಲ್ಲ. ಓನ್ಲೀ ಅಲ್ಲಾ ಹು ಅಕ್ಬರ್ ಎಂದು ಹೇಳಿ, ಇದಲ್ಲದೆ ಕಾರಿನಲ್ಲಿ ಇದ್ದವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ.

ಇದೇ ವೇಳೆ ಕಾರಿನಲ್ಲಿದ್ದ ಯುವಕರು, ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡ್ತಿವಾ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಅಲ್ಲೆ ಇದ್ದ ಮತ್ತೆ ಇಬ್ಬರು ಸೇರಿಕೊಂಡು ಮೂವರು ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಧ್ಯ ರಸ್ತೆಯಲ್ಲಿ ಅಡ್ಡಗಟ್ಟಿ ಪುಂಡಾಟ ಮಾಡಿದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *