ಆರೋಪಿಗಳು ಸಿಬಿಐ ವಶ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು : ದಿನ ನಿತ್ಯ ಜನರು ಬಳಸುವ ವಸ್ತುಗಳನ್ನೇ ಟಾರ್ಗೆಟ್ ಮಾಡಿಕೊಂಡ ಗ್ಯಾಂಗ್​ವೊಂದು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿತ್ತು. ಜೊತೆಗೆ ವ್ಯವಸ್ಥಿತವಾಗಿ ನಕಲಿ ವಸ್ತುಗಳ ಮಾರಾಟ ಮಾಡುತಿತ್ತು. ಸದ್ಯ ಈ ಗ್ಯಾಂಗ್ ಈಗ ಸಿಸಿಬಿ ಬಲೆಗೆ ಬಿದ್ದಿದೆ. ಶಿವಪಾಟೀಲ್, ದೌಲತ್ ಸಿಂಗ್ ಹಾಗೂ ಶುಬಂ ಬಂಧಿತ ಆರೋಪಿಗಳು.

ನೋಡಲು ಥೇಟ್‌ ಅಸಲಿಯಂತೆ ಕಾಣುವ ವಸ್ತುಗಳು ನಕಲಿ ಜನರ ಕಣ್ಣಿಗೆ ಮಣ್ಣೆರಚಿ 5 ವರ್ಷದಿಂದ ಮಾರಾಟ ಮಾಡುತ್ತದ್ದರು. ಉತ್ತರ ಭಾರತದ ಈ ಆರೋಪಿಗಳು ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ರು. ಈ ವೇಳೆ ವಸ್ತುಗಳ ನಕಲಿ ಮಾಡೊದ್ರಲ್ಲೇ ಕುಖ್ಯಾತಿ ಹೊಂದಿದ್ದಾನೆ ಎನ್ನಲಾದ ಮಹೇಶ್ ಗಾಂಧಿ ಎಂಬಾತನ ಬಳಿ ಒಂದಿಷ್ಟು ವರ್ಷ ಕೆಲಸ ಮಾಡಿದ್ದರು.

ರಾಜ್ಯ ಸೇರಿದಂತೆ ಹಲವು ಕಡೆ ತಮ್ಮದೇ ಆದ ಜಾಲ ರೂಪಿಸಿಕೊಂಡ ಇವರು ತಮ್ಮ ವ್ಯವಹಾರ ಶುರು ಮಾಡಿದ್ದರು. ಶಿವ ಪಾಟೀಲ್ ನಕಲಿ ವಸ್ತುಗಳ ತಯಾರಿ ಮಾಡಿದ್ರೆ ದೌಲತ್ ಸಿಂಗ್ ಅದರ ಡಿಸ್ಟ್ರಿಬ್ಯೂಟಿಂಗ್ ನೋಡಿ ಕೊಳ್ಳುತಿದ್ದ. ಹೀಗೆ ಐದು ವರ್ಷದಿಂದ ಕೃತ್ಯ ಎಸಗಿದ ಇವರ ಮೇಲೆ ಪ್ರತಿಷ್ಠಿತ ಕಂಪನಿಗಳಿಗೆ ಮಾಹಿತಿ ದೊರೆತಿದೆ.

ಸರ್ಳ್ ಎಕ್ಸೆಲ್, ವಿಮ್ ಲಿಕ್ವಡ್, ಲೈಫ್ ಬಾಯ್ ಹ್ಯಾಂಡ್ ವಾಶ್, ರಿನ್, ವೀಲ್ ಡಿಟರ್ಜಂಟ್ ಪೌಡರ್, ರೆಡ್ ಲೇಬಲ್ ಟಿ ಪೌಡರ್, ಲೈಜಾಲ್, ಹಾರ್ಪಿಕ್ ಸೇರಿದಂತೆ ಹಲವು ಉತ್ಪನ್ನಗಳ ನಕಲಿ ವಸ್ತುಗಳನ್ನು ಇರಿಸಲಾಗಿದ್ದ ವಿಲ್ಸನ್ ಗಾರ್ಡನ್ ನ ಗೋಡಾನ್ ಹಾಗೂ ಇದನ್ನು ತಯಾರಿಸುತಿದ್ದ ಆವಲಹಳ್ಳಿ ಬಳಿಯ ರಾಮಪುರ ಮತ್ತು ಬಿದರಹಳ್ಳಿಯ ಫ್ಯಾಕ್ಟರಿಗಳಿಗೆ ಸಿಸಿಬಿ ದಾಳಿ ಮಾಡಿ ನಕಲಿ ತಯಾರಿಕಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಸದ್ಯ ಈ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ 95 ಲಕ್ಷ ಮೌಲ್ಯದ ನಕಲಿ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.

Font Awesome Icons

Leave a Reply

Your email address will not be published. Required fields are marked *