ಉಚಿತ ಯೋಜನೆಗಳ ಪಟ್ಟಿ ಹೀಗಿದೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಮೈಸೂರು: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮೋದಿ ಅವರು, ಮತ್ತೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ರಚನೆಯಾದರೆ ಮುಂದಿನ ಐದು ವರ್ಷಕ್ಕೆ ಏನೆಲ್ಲ ಕೆಲಸ ಮಾಡುತ್ತೇವೆ ಎಂದು ಹಾಗೂ ಗೆ ಏನೆಲ್ಲ ಉಚಿತವಾಗಿ ಸಿಗಲಿದೆ ಎಂದು ತಿಳಿಸಿದರು.

ಯುವಕರು, ಮಹಿಳೆಯರು, ರೈತರು ಹಾಗೂ ಬಡವರನ್ನು ಇಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ ಎಂದ ಅವರು ಉಚಿತ ಆಯೋಜನಗಳ ಪಟ್ಟಿ ತಿಳಿಸಿದ್ದಾರೆ.
ಬಡ ಕುಟುಂಬಗಳಿಗೆ ಉಚಿತ ಪಡಿತರ
ಬಡ ಕುಟುಂಬಗಳಿಗೆ ಉಚಿತ ಪಡಿತರ ನೀಡುವ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ. 2020ರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಈ ಯೋಜನೆಯಡಿ 80 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಬಡವರ ತಟ್ಟೆಯನ್ನು ಖಾಲಿ ಬಿಡಲು ಬಿಡುವುದಿಲ್ಲ ಎಂದಿದ್ದಾರೆ

70 ವರ್ಷ ಮೇಲ್ಪಟ್ಟ ವೃದ್ಧರಿಗೆ ಉಚಿತ ಚಿಕಿತ್ಸೆ
ಆಯುಷ್ಮಾನ್ ಭಾರತ್ ಯೋಜನೆಯಡಿ ಬಡ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ. ಇತರೆ ಆರೋಗ್ಯ ಸೇವೆಗಳನ್ನೂ ಇದರಡಿ ಸೇರಿಸಲಾಗುವುದು. ಶೇಕಡಾ 80 ರಷ್ಟು ರಿಯಾಯತಿಯೊಂದಿಗೆ ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳು ಲಭ್ಯವಾಗಲಿದೆ

ಪೈಪ್​ಲೈನ್ ಮೂಲಕ ಎಲ್​ಪಿಜಿ:
ಉಜ್ವಲ ಯೋಜನೆಯಡಿ ಬಡ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ನೀಡಲಾಗುತ್ತಿದೆ. ಪ್ರತಿ ಮನೆಗೂ ಗ್ಯಾಸ್ ಸೌಲಭ್ಯ ತಲುಪಿದೆ. ಈಗ ಪೈಪ್ ಮೂಲಕ ಪ್ರತಿ ಮನೆಗೆ ಅಗ್ಗದ ಅಡುಗೆ ಅನಿಲ ತಲುಪಿಸಲಾಗುವುದು. ಮೂರು ಕೋಟಿ ಕುಟುಂಬಗಳಿಗೆ ಶಾಶ್ವತ ಮನೆ ನೀಡಲಾಗುವುದು ಎಂದರು.

ಉಚಿತ ವಿದ್ಯುತ್
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಸೋಲಾರ್ ಮೂಲಕ 300 ಯುನಿಟ್​ವರೆಗೆ ಉಚಿತ್ ವಿದ್ಯುತ್ ನೀಡಲಾಗುವುದು ಎಂದರು. ಅಷ್ಟೇ ಅಲ್ಲ, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುವ ಜನರು, ವಾರ್ಷಿಕ ಸಾವಿರಾರರು ರೂಪಾಯಿ ಮುದ್ರಾ ಯೋಜನೆಯ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

Font Awesome Icons

Leave a Reply

Your email address will not be published. Required fields are marked *