ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ “ನೋವು ಮುಕ್ತ ಮಂಗಳೂರು” ಅಭಿಯಾನ

ಮಂಗಳೂರು: ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ರುಮಟಾಲಜಿ (ಸಂಧಿವಾತ) ವಿಭಾಗ ಹಾಗೂ ಫಿಸಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಶನ್ (ದೈಹಿಕ ಔಷಧ ಮತ್ತು ಪುನರ್ವಸತಿ) ವಿಭಾಗವು ಜಂಟಿಯಾಗಿ ಮಂಗಳೂರಿನಲ್ಲಿ ಮೊದಲ ಬಾರಿಗೆ “ನೋವು ಮುಕ್ತ ಮಂಗಳೂರು” ಅಭಿಯಾನವನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಆಯೋಜಿಸುತ್ತಿದೆ.

ಈ ಅಭಿಯಾನವು ಮೇ 6 ರಿಂದ ಮೇ 11 ರವರೆಗೆ ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಹಮ್ಮಿಕೊಳ್ಳಲಾಗಿದ್ದು ಸಂಧಿ ನೋವು, ಕುತ್ತಿಗೆ ನೋವು/ ಬೆನ್ನು ನೋವು. ಕೈಗಳು ಮತ್ತು ಪಾದಗಳಲ್ಲಿ ಉರಿಯ ಅನುಭವ, ನರ ಸಂಬಂಧಿ ನೋವುಗಳಿಂದ ಬಳಲುತ್ತಿರುವವರು ಈ ನೋವು ಮುಕ್ತ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಆರ್ಥೈಟಿಸ್ (ರುಮಟಾಯ್ಡ್ ಆರ್ಥೈಟಿಸ್, ಸೋರಿಯಾಟಿಕ್ ಆರ್ಥೈಟಿಸ್, ಅಂಕಿಲೋಸಿಂಗ್ ಸ್ಪಾಂಡಿಲೈಟಿಸ್) ಓಸ್ಟಿಯೊಆರ್ಥೈಟಿಸ್, ಗೌಟ್, ಬೆನ್ನುಹುರಿ ಗಾಯಗಳಿಂದಾಗಿ ನೋವು/ ಲಕ್ವಾ, ಫೈಬೊಮಯಾಲ್ಟಿಯಾ/ ಮೇಯೊಫೇಶಿಯಲ್ ಪೈನ್ ಸಿಂಡೋಮ್, ಮಯೋಸೈಟಿಸ್‌/ ಎಸ್‌.ಎಲ್ಏ. ಮುಂತಾದ ಸಮಸ್ಯೆಗಳಿಗೆ ರುಮಟಾಲಜಿ ಮತ್ತು ಫಿಸಿಕಲ್ ಮೆಡಿಸಿನ್ ಪುನರ್ವಸತಿ ತಜ್ಞರಿಂದ ಉಚಿತ ಸಮಾಲೋಚನೆಯು ದೊರೆಯಲಿದೆ.

ಶಿಬಿರದಲ್ಲಿ ಸಮಾಲೋಚನೆ ಮತ್ತು ಫಿಸಿಯೋಥೆರಪಿ ಉಚಿತವಾಗಿದ್ದು ಲ್ಯಾಬೋರೇಟರಿ ಪರೀಕ್ಷೆಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಈ ಶಿಬಿರವು ಅಪಾಯಿಂಟ್ಮೆಂಟ್ ಆಧಾರಿತವಾಗಿರುತ್ತದೆ.

ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೆಎಂಸಿ ಆಸ್ಪತ್ರೆ, ಅತ್ತಾವರದ ವೈದ್ಯಕೀಯ ಅಧೀಕ್ಷಕರು ಕರೆ ನೀಡಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ನೋಂದಾವಣೆ/ ಸಮಯ ಕಾಯ್ದಿರಿಸಿಕೊಳ್ಳಲು ದಯವಿಟ್ಟು 7022078002 ಕ್ಕೆ ಕರೆ ಮಾಡಿ.

Font Awesome Icons

Leave a Reply

Your email address will not be published. Required fields are marked *