ಕೊಟಕ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್ , ಆನ್‌ಲೈನ್‌ ಸೇವೆಗಳು ನಿಷೇಧ

ಮುಂಬೈ: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೊಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ಶಾಕ್‌ ನೀಡಿದೆ. ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಟ್‌ ವಿತರಣೆ ಮಾಡಬಾರದು. ಹಾಗೆಯೇ, ಹೊಸ ಗ್ರಾಹಕರಿಗೆ ಆನ್‌ಲೈನ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಬಾರದು ಎಂಬುದು ಸೇರಿ ಹಲವು ನಿರ್ಬಂಧಗಳನ್ನು ವಿಧಿಸಿದೆ.

ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸುವುದು, ಅವರಿಗೆ ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿರುವ ಕಾರಣ ಹಳೆಯ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಕೊಟಕ್‌ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು, ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕ್‌ ಸೌಲಭ್ಯ ಹೊಂದಿರುವವರು ಸೇವೆಗಳನ್ನು ಪಡೆಯಬಹುದಾಗಿದೆ. ಹಾಗಾಗಿ, ಹಳೆಯ ಗ್ರಾಹಕರಿಗೆ ಆರ್‌ಬಿಐ ಆದೇಶದಿಂದ ಯಾವುದೇ ತೊಂದರೆ ಆಗುವುದಿಲ್ಲ.

“ಈಗಾಗಲೇ ಆನ್‌ಲೈನ್‌, ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯಗಳನ್ನು ಹೊಂದಿರುವ ಗ್ರಾಹಕರಿಗೆ ಕೊಟಕ್‌ ಮಹೀಂದ್ರಾ ಬ್ಯಾಂಕ್‌ ಸೇವೆಗಳನ್ನು ಮುಂದುವರಿಸಬಹುದು. ಈಗಾಗಲೇ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಹಳೆಯ ಗ್ರಾಹಕರಿಗೂ ಸೇವೆಗಳನ್ನು ಮುಂದುವರಿಸಲು ಯಾವುದೇ ನಿರ್ಬಂಧವಿಲ್ಲ” ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

 

Font Awesome Icons

Leave a Reply

Your email address will not be published. Required fields are marked *