ಕೊಲೆಯಲ್ಲಿ ಅಂತ್ಯ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ಕರಗ ಉತ್ಸವದ ಮೆರವಣಿಗೆಯ ವೇಳೆ ನಡೆದ ಕಿರಿಕ್‌ ನಿಂದ ಯುವಕ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.

ಸಾರದಿ ಮೃತಪಟ್ಟ ಯುವಕ. ಏಪ್ರಿಲ್ 24ರಂದು ಬೆಂಗಳೂರು ನಗರದ ಮಧ್ಯಭಾಗದಲ್ಲಿ ಲಕ್ಷಾಂತರ ಜನ ಕರಗ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅಂದು ಮಧ್ಯರಾತ್ರಿ 3.30ರ ಸುಮಾರಿಗೆ ಅಣ್ಣಮ್ಮ ದೇವಾಲಯದ ಮುಂದೆ ಯುವಕರ ಮಧ್ಯೆ ಗಲಾಟೆ ನಡೆದಿದೆ.

ಡ್ಯಾನ್ಸ್ ಮಾಡುತ್ತಿದ್ದ ಒಬ್ಬ ವ್ಯಕ್ತಿ ಸಾರದಿ ಮತ್ತು ಸ್ನೇಹಿತರನ್ನು ಟಚ್ ಮಾಡಿದ್ದಾನೆ. ಟಚ್ ಮಾಡಿದ್ದನ್ನು  ಪ್ರಶ್ನಿಸಿದ್ದಕ್ಕೆ ಮೂರ್ನಾಲ್ಕು ಹುಡುಗರಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಸಾರದಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ತಕ್ಷಣವೇ ಸಾರದಿಯನ್ನು ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಭೀರವಾಗಿದ್ದ ಸಾರದಿಯನ್ನು ಕೆ.ಸಿ ಜನರಲ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾರದಿ ಮೃತಪಟ್ಟಿದ್ದಾರೆ. ಸಾರದಿಯು ವಿವಿ ಗಿರಿ ಕಾಲೋನಿಯ ಯುವಕ. ಕರಗದ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಆದ ಕಿರಿಕ್‌ ದುರಂತಕ್ಕೆ ಕಾರಣವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *