ಅಮೆರಿಕ: ಕ್ಯಾಲಿಫೋರ್ನಿಯಾದ ಸೊನೊಮಾ ಕೌಂಟಿಯ ಸಾಂಟಾ ರೋಸಾ ಬಳಿ ನಾಲ್ಕು ಭೂಕಂಪಗಳು ಸಂಭವಿಸಿದೆ. ಶುಕ್ರವಾರ ಬೆಳಿಗ್ಗೆ 8:42 ಕ್ಕೆ ಗೀಸರ್ಸ್ನ ವಾಯುವ್ಯದಲ್ಲಿ 3.1 ತೀವ್ರತೆಯ ಭೂಕಂಪದೊಂದಿಗೆ ಭೂಕಂಪನ ಪ್ರಾರಂಭವಾಯಿತು. ನಂತರ ಮಧ್ಯಾಹ್ನ 1:28 ಕ್ಕೆ 4.2 ತೀವ್ರತೆಯ ಭೂಕಂಪನ, ಮಧ್ಯಾಹ್ನ 1:32 ಕ್ಕೆ 2.5 ಮತ್ತು ಅಂತಿಮವಾಗಿ ಮಧ್ಯಾಹ್ನ 2:23 ಕ್ಕೆ 3.0 ಭೂಕಂಪನ ಸಂಭವಿಸಿದೆ ಎಂದು ತಿಳಿದು ಬಂದಿದೆ.