ಚಿರತೆ ದಾಳಿಗೆ 21 ಕುರಿಗಳು ಬಲಿ : ಅರಣ್ಯಾಧಿಕಾರಿಗಳು ಭೇಟಿ

ಬಳ್ಳಾರಿ: ಹೊಲದಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಇದ್ದಕಿದ್ದಂತೆ ಚಿರತೆ ದಾಳಿ ಮಾಡಿ 21 ಕುರಿಗಳನ್ನು ಬಲಿ ಪಡೆದುಕೊಂಡಿದೆ. ಘಟನೆ ಬಳ್ಳಾರಿ ತಾಲೂಕಿನ ಸಂಜೀವತಾಯನಕೋಟೆ ಗ್ರಾಮದ ಬಳಿ ನಡೆದಿದೆ.

ತಡ ರಾತ್ರಿ ಚಿರತೆಯೊಂದು ಹೊಲಕ್ಕೆ ನುಗ್ಗಿದ್ದು ಹಟ್ಟಿಹಾಕಿ ನಿಲ್ಲಿಸಿದ್ದ 21 ಕುರಿಗಳನ್ನ ಸಾಯಿಸಿ 2 ಕುರಿ ಹೊತ್ತೊಯ್ದಿದೆ. ರೈತ ಸಣ್ಣ ತಿಮ್ಮಪ್ಪ ಎಂಬುವವರ 21 ಕುರಿಗಳು ಮೃತಪಟ್ಟಿವೆ. ಕುರಿ ಗಳೆದಕೊಂಡ ಕಂಗಾಲಾಗಿದ್ದಾನೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Font Awesome Icons

Leave a Reply

Your email address will not be published. Required fields are marked *