ಚೈತ್ರ ನವರಾತ್ರಿ ಸ್ಮೃತಿ ಇರಾನಿ ಕೈಯಲ್ಲಿ ಮೀನು? ಫೋಟೋ ವೈರಲ್ ಜನರನ್ನು ದಾರಿ ತಪ್ಪಿಸುವ ಉದ್ದೇಶ

ಚೆನ್ನೈ:  ಪ್ರಧಾನಿ ಮೋದಿ ಅವರು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಶ್ರಾವಣದ ವೇಳೆ ಮನೆಯಲ್ಲಿ ಮಟನ್ ಬೇಯಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ ಎಂದು ಹರಿಹಾಯ್ದಿದ್ದರು. ಇದರ ಜೊತೆಯಲ್ಲಿ ಚೈತ್ರ ನವರಾತ್ರಿ ವೇಳೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಾಕಿಕೊಂಡಿದ್ದ ಮೀನೂಟದ ವಿಡಿಯೋ ವಿರುದ್ಧವೂ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ವಿಪಕ್ಷ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಮಯದಲ್ಲಿಯೇ ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ತಮ್ಮ ಕೈನಲ್ಲಿ ಮೀನು ಹಿಡಿದುಕೊಂಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೆಟ್ಟಿಗರು ಚೈತ್ರ ನವರಾತ್ರಿಯ ಸಮಯದಲ್ಲಿ ಸ್ಮೃತಿ ಇರಾನಿ ಅವರು ಮೀನು ಹಿಡಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಯಲ್ಲೇ ಅದೇ ಕಾರ್ಯಕ್ರಮದಲ್ಲಿ ದುರ್ಗಾ ಮಾತೆಯ ಫೋಟೋ ಹಿಡಿದುಕೊಂಡಿರುವ ಫೋಟೋವನ್ನೂ ಪ್ರಕಟಿಸಿದ್ದಾರೆ. ಸ್ಮೃತಿ ಇರಾನಿ ಅವರು ಒಂದು ಕೈನಲ್ಲಿ ಮೀನು, ಮತ್ತೊಂದು ಕೈನಲ್ಲಿ ದುರ್ಗೆಯ ಫೋಟೋ ಹಿಡಿದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಫೇಸ್‌ಬುಕ್ ಬಳಕೆದಾರರೂ ಕೂಡಾ ಇದೇ ರೀತಿಯ ಆರೋಪ ಮಾಡಿ ಪೋಸ್ಟ್‌ ಹಾಕಿಕೊಂಡಿದ್ದಾರೆ.

ಚೈತ್ರ ನವರಾತ್ರಿ ಏಪ್ರಿಲ್ 9 ರಂದು ಆರಂಭವಾಗಿತ್ತು. ಆದರೆ, ಈ ಫೋಟೋ ಅದಕ್ಕೂ ಮುನ್ನ ತೆಗೆಯಲಾಗಿತ್ತು. ಸ್ಮೃತಿ ಇರಾನಿ ಉತ್ತರ ಚೆನ್ನೈ ಬಿಜೆಪಿ ಅಭ್ಯರ್ಥಿ ಆರ್. ಸಿ. ಪೌಲ್ ಕನಗರಾಜ್ ಪರ ಸ್ಮೃತಿ ಇರಾನಿ ಅವರು ಚುನಾವಣಾ ಪ್ರಚಾರ ಮಾಡಲು ಬಂದಿದ್ದ ವೇಳೆ ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಸತೀಶ್ ಕುಮಾರ್ ಅವರು ಮೀನನ್ನು ಉಡುಗೊರೆಯಾಗಿ ನೀಡಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸ್ಮೃತಿ ಇರಾನಿ ಅವರ ಅಧಿಕೃತ ಎಕ್ಸ್‌ ಖಾತೆಯಲ್ಲಿ ದುರ್ಗಾ ಮಾತೆಯ ಫೋಟೋ ಹಿಡಿದುಕೊಂಡಿರುವ ಸ್ಮೃತಿ ಇರಾನಿ ಅವರ ಫೋಟೋ ಇದೆ ತಮಿಳುನಾಡಿನಲ್ಲಿ ಕನಗರಾಜ್ ಪರ ಚುನಾವಣಾ ಪ್ರಚಾರದ ಬಳಿಕ ಸ್ಮೃತಿ ಇರಾನಿ ಅವರು ಪ್ರವಾಸಿ ಮಹಿಳಾ ಸಂಘದ ಕಾರ್ಯಕರ್ತೆಯರ ಜೊತೆಗೂ ಮಾತುಕತೆ ನಡೆಸುವ ಫೋಟೋಗಳನ್ನು ಪ್ರಕಟಿಸಲಾಗಿದೆ.

ಸ್ಮೃತಿ ಇರಾನಿ ಅವರು ಚೈತ್ರ ನವರಾತ್ರಿ ವೇಲೆ ಮೀನನ್ನು ಹಿಡಿದುಕೊಂಡಿದ್ದಾರೆ ಎಂದು ಬಿಂಬಿಸಿ ಪ್ರಕಟಿಸಲಾಗಿದ್ದ ಫೋಟೋ ಹಾಗೂ ಪೋಸ್ಟ್‌ ಜನರನ್ನು ತಪ್ಪುದಾರಿಗೆ ಎಳೆಯುವ ದುರುದ್ದೇಶ ಹೊಂದಿತ್ತು ಎಂದು ಸಾಬೀತಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *