ತಂದೆ, ವರ ಪೊಲೀಸರ ವಶಕ್ಕೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು  70 ವರ್ಷದ ವ್ಯಕ್ತಿ ಮದುವೆಯಾಗಿದ್ದಕ್ಕಾಗಿ ಪೊಲೀಸರು ಬಂಧಿಸಿದ ಘಟನೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

ದೇಶದ ಪ್ರಸ್ತುತ ಶಾಸನದ ಅಡಿಯಲ್ಲಿ, 1929 ರ ವಿವಾಹ ತಡೆ ಕಾಯಿದೆಯು ಕನಿಷ್ಟ ಮದುವೆಯ ವಯಸ್ಸನ್ನು ಹುಡುಗಿಯರಿಗೆ 16 ಮತ್ತು ಹುಡುಗರಿಗೆ 18 ಎಂದು ವ್ಯಾಖ್ಯಾನಿಸಲಾಗಿದೆ.

ಅಪ್ರಾಪ್ತ ಬಾಲಕಿಯ ತಂದೆ ಆಕೆಯನ್ನು ವೃದ್ಧನಿಗೆ ಮದುವೆ ಮಾಡಿಸಿದ್ದಾನೆ. ಈ ಮಾಹಿತಿಯನ್ನು ಪಡೆದ ಕಾನೂನು ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವರ ಮತ್ತು ಬಾಲಕಿ ತಂದೆ ಇಬ್ಬರನ್ನೂ ಬಂಧಿಸಿದ್ದಾರೆ.

ಇದು ಪಾಕಿಸ್ತಾನದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ ದೇಶದ ಯುವತಿಯರ ಯೋಗಕ್ಷೇಮಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *