ತಾಯಿಯಾಗುತ್ತಿದ್ದಾರ ನಟಿ ಪರಿಣೀತಿ ಚೋಪ್ರಾ? – News Kannada (ನ್ಯೂಸ್ ಕನ್ನಡ)

ಪರಿಣೀತಿ ಚೋಪ್ರಾ ಹಾಗೂ ರಾಘವ್ ಛಡ್ಡಾ ದಂಪತಿ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದು, ಇದೀಗ ಪರಿಣತಿ ತಾಯಿಯಾಗುತ್ತಿದ್ದಾರ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅವರು ಲೂಸ್ ಫಿಟ್ಟಿಂಗ್ ಡ್ರೆಸ್​ನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

ಆದರೆ, ಈ ವಿಚಾರದಲ್ಲಿ ನಿಜ ಇಲ್ಲ ಎಂದು ಹೇಳಲಾಗುತ್ತಿದೆ. ಕುಟುಂಬದ ಕಡೆಯಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

‘ಪರಿಣೀತಿ ಚೋಪ್ರಾ ಅವರ ಪ್ರೆಗ್ನೆನ್ಸಿ ವದಂತಿ ಸುಳ್ಳು. ಅವರು ಕೆಲಸಕ್ಕಾಗಿ ನಾನಾ ಊರುಗಳಿಗೆ ತೆರಳಬೇಕಾಗುತ್ತದೆ. ಯಾವ ಬಟ್ಟೆ ಹಾಕಿಕೊಳ್ಳಬೇಕು ಎಂಬುದು ಅವರ ಆಯ್ಕೆ. ಇದರಿಂದ ಈ ರೀತಿ ವದಂತಿ ಹೊರಡಿಸುವುದು ಸರಿ ಅಲ್ಲ’ ಎಂದು ಪರಿಣೀತಿ ಚೋಪ್ರಾ ಆಪ್ತರು ಹೇಳರುವುದಾಗಿ ವರದಿ ಆಗಿದೆ.

ರಾಘವ್ ಹಾಗೂ ಪರಿಣೀತಿ 2023ರ ಸೆಪ್ಟೆಂಬರ್​ನಲ್ಲಿ ಮದುವೆ ಆದರು. ರಾಜಸ್ಥಾನದ ಉದಯಪುರದಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆದಿದೆ.

Font Awesome Icons

Leave a Reply

Your email address will not be published. Required fields are marked *