ದಿವ್ಯ ಪ್ರಭು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಧಾರವಾಡ: ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ಧವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ಅಭ್ಯರ್ಥಿಗಳಲ್ಲಿ ಎಂಟು ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆಯಲು ನೀಡಿದ್ದ ಸಮಯದಲ್ಲಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು, ಅಂತಿಮವಾಗಿ ಧಾರವಾಡ ಲೋಕಸಭಾ ಚುನಾವಣಾ ಸ್ಪರ್ಧೆಯಲ್ಲಿ 17 ಜನ ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ರಮಬದ್ಧವಾಗಿ ನಾಮನಿರ್ದೇಶನಗೊಂಡಿದ್ದ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಲು ಇಚ್ಚಿಸಿದ್ದಲ್ಲಿ ಅವರಿಗೆ ಇಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಅದರಂತೆ ಒಟ್ಟು ಎಂಟು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್‌ ಪಡೆದಿದ್ದಾರೆ.

ಕ್ರಮಬದ್ಧವಾಗಿ ನಾಮ ನಿರ್ದೇಶನಗೊಂಡಿದ್ದ ವೀಣಾ ಜನಗಿ, ಪ್ರವೀಣಕುಮಾರ ಮಾದರ, ರವಿ ಪಟ್ಟಣಶೆಟ್ಟಿ, ರಿಯಾಜ
ಶೇಖ್, ದಿಂಗಾಲೇಶ್ವರ ಸ್ವಾಮೀಜಿ, ಶಿವಾನಂದ ಮುತ್ತಣ್ಣವರ, ರಾಜಶೇಖರಯ್ಯ ಕಂತಿಮಠ ಮತ್ತು ವೆಂಕಟೇಶ ಆಚಾರ್ಯ
ಮಣ್ಣೂರ ಅವರು ತಮ್ಮ ಉಮೇದುವಾರಿಕೆ ವಾಪಸ್‌ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಂತಿಮವಾಗಿ ಧಾರವಾಡ-11 ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿಯಿಂದ ಪ್ರಹ್ಲಾದ ಜೋಶಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ವಿನೋದ್‌ ಅಸೂಟಿ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ನಾಕಿ ಭಾರತೀಯ ಏಕತಾ ಪಾರ್ಟಿಯಿಂದ ಜಾವೀದ್ ಅಹಮದ್ ಬೆಳಗಾಂವಕ‌ರ್, ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗರಾಜ ಕರೆಣ್ಣವರ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬುಗಡಿ ಬಸವಲಿಂಗಪ್ಪ ಈರಪ್ಪ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹ್ಮದ್ ಇಸ್ಮಾಯಿಲ್ ಮುಕ್ತಿ, ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದಿಂದ ವಿನೋದ ದಶರಥ ಘೋಡಕೆ, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ, ಪುಲೆ)ಯಿಂದ ವೆಂಕಟೇಶ ಪ್ರಸಾದ ಎಚ್., ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದಿಂದ ಶರಣಬಸವ ಗೋನವಾರ ಮತ್ತು ಟಿಪ್ಪು ಸುಲ್ತಾನ ಪಾರ್ಟಿಯಿಂದ ಬಂಕಾಪುರ ಶೌಖತ್ ಅಲಿ ಅವರು ಸ್ಪರ್ಧಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಗುರಪ್ಪ ಇಮ್ರಾಪೂರ, ಪ್ರವೀಣ ಹತ್ತೆನವರ, ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ರಾಜು ಅನಂತಸಾ ನಾಯಕವಾಡಿ, ಶಕೀಲ್ ಅಹ್ಮದ ಡಿ ಮುಲ್ಲಾ ಮತ್ತು ಎಸ್.ಎಸ್.ಪಾಟೀಲ್ ಸ್ಪರ್ಧಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *