ದೆಹಲಿ: ಇದೀಗ ನೆರೆಯ ಭೂತಾನ್ ದೇಶದ ರಾಷ್ಟ್ರೀಯ ಆಹಾರ ಖಾದ್ಯ ದೀಪಿಕಾ ಪಡುಕೋಣೆಯಿಂದಾಗಿ ಸಖತ್ ವೈರಲ್ ಆಗುತ್ತಿದೆ. ಪರೋಕ್ಷವಾಗಿ ಭೂತಾನ್ರ ಆಹಾರ ಖಾದ್ಯಕ್ಕೆ ಸಖತ್ ಪ್ರಚಾರ ನೀಡಿದ್ದಾರೆ.
ಇದೀಗ ಕೆಲವು ದಿನಗಳ ಹಿಂದೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಮತ್ತೆ ಭೂತಾನ್ ಬಗ್ಗೆ ಅಲ್ಲಿನ ಒಂದು ಆಹಾರ ಖಾದ್ಯದ ಬಗ್ಗೆ ಮಾತನಾಡಿದ್ದಾರೆ.
ತಮಗೆ ಭೂತಾನ್ನ “ಎಮಾ ದಟ್ಶಿ” ಎಂದರೆ ಬಹಳ ಇಷ್ಟವೆಂದು, ಆ ಖಾದ್ಯ ನನ್ನ ಮನಸ್ಸು ಗೆದ್ದು ಬಿಟ್ಟಿದೆ ಎಂದು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ. ಎಮಾ ಎಂದರೆ ಭೂತಾನ್ನಲ್ಲಿ ಮೆಣಸಿನಕಾಯಿ, ದಾಟ್ಶಿ ಎಂದರೆ ಚೀಸ್ ಎಂದರ್ಥ.
ಇಷ್ಟು ಹೇಳಿದ್ದೆ ತಡ ದೀಪಿಕಾ ಅಭಿಮಾನಿಗಳು, ಭಾರತದ ಆಹಾರ ಪ್ರಿಯರು ಏನದು ‘ಎಮಾ ದಟ್ಶಿ’ ಎಂದು ಹುಡುಕಾಟ ಆರಂಭ ಮಾಡಿದ್ದು ಮಾತ್ರವಲ್ಲದೆ ಮನೆಗಳಲ್ಲಿ ಎಮಾ ದಟ್ಶಿಯನ್ನು ತಯಾರಿಸಿ ಅದರ ವಿಡಿಯೋಗಳನ್ನು ಇನ್ಸ್ಟಾಗ್ರಾಂ ರೀಲ್ಸ್ಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದ್ದಾರೆ.
2023ರ ಏಪ್ರಿಲ್ ತಿಂಗಳಲ್ಲಿ ದೀಪಿಕಾ ಪಡುಕೋಣೆ ಭೂತಾನ್ಗೆ ಹೋಗಿದ್ದರು. ಅಲ್ಲಿನ ಕೆಲವು ಚಿತ್ರಗಳನ್ನು ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಭೂತಾನ್ನ ಕೆಲವು ಆಹಾರ ಖಾದ್ಯಗಳ ಚಿತ್ರಗಳನ್ನೂ ಸಹ ಅವರು ಆಗ ಹಂಚಿಕೊಂಡಿದ್ದರು.