ದೂರು ದಾಖಲು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಉತ್ತರಪ್ರದೇಶ: ಶಿಕ್ಷಕಿಯೊಬ್ಬಳು ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪಾರುಲ್‌ ಶರ್ಮಾ ಎಂಬ ಶಿಕ್ಷಕಿ ಬೆಳಗ್ಗೆ 3 ಗಂಟೆ ಸುಮಾರಿಗೆ ಪ್ರಿಯಾ ಗೋಯಲ್‌ ಎಂಬಾಕೆಯ ಮನೆಯ ಕಾಂಪೌಂಡ್‌ ಒಳಗೆ ನುಗ್ಗಿ ತಾನು ತಂದಿದ್ದ ಬ್ಯಾಗ್‌ನಿಂದ ಇಟ್ಟಿಗೆ, ಕಲ್ಲುಗಳಿಂದ ಕಾರಿನ ವಿಂಡೋ ಗ್ಲಾಸ್‌ ಹೊಡೆದು ಹಾಕಿದ್ದಾರೆ.

ಸದ್ದು ಕೇಳಿ ಎಚ್ಚರಗೊಂಡ ಪ್ರಿಯಾ ಗೋಯಲ್‌ ಹಾಗೂ ಆಕೆಯ ಕುಟುಂಬಸ್ಥರು ಪಾರುಲ್‌ಳನ್ನು ತಡೆಯಲು ಮುಂದಾಗಿದ್ದಾರೆ. ಆದರೂ ಅದನ್ನೂ ಲೆಕ್ಕಿಸದ ಪಾರುಲ್‌ ಪದೇ ಪದೇ ಕಲ್ಲಿನಿಂದ ಕಾರಿನ ಗ್ಲಾಸ್‌ ಪುಡಿ ಪುಡಿ ಮಾಡಿದ್ದಾರೆ.

ಇದೀಗ ಪಾರುಲ್‌ ಕೃತ್ಯದ ವಿರುದ್ಧ ಪ್ರಿಯಾ ಗೋಯಲ್‌ ಪೊಲೀಸರಿಗೆ ದೂರು ನೀಡಿದ್ದು, ಕಾರಿನ ಗ್ಲಾಸ್‌ ಪುಡಿ ಮಾಡಿರುವ ಪಾರುಲ್‌ ಮನೆಯ ಗೇಟ್‌ ಲಾಕ್‌ ಒಡೆದು ತಮ್ಮ ಮೂರು ವರ್ಷದ ಮಗು ಸೇರಿದಂತೆ ಇತರೆ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾಳೆ. ಘಟನೆಯಲ್ಲಿ ಮಗು ಗಾಯಗೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸೂಕ್ತ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದೆ.

ಮೇಲ್ನೋಟಕ್ಕೆ ಎರಡೂ ಕುಟುಂಬಗಳು ಹಲವು ದಿನಗಳಿಂದ ವೈಷಮ್ಯ ಹೊಂದಿದ್ದು, ಅದರ ಪರಿಣಾಮವಾಗಿಯೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ಶಂಕರ್‌ ಪ್ರಸಾದ್‌ ಮಾಹಿತಿ ಪ್ರಕಾರ ಸದ್ಯ ಬುಲಂದ್‌ಶೆಹರ್‌ನಲ್ಲಿ ಈ ವಿಡಿಯೋ ಬಹಳ ವೈರಲ್‌ ಆಗುತ್ತಿದ್ದು, ಪಾರುಲ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *