“ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ”

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರ ಸಾವಿನ ಕುರಿತಾಗಿ ಮಾತನಾಡಿ ಕಾಂಗ್ರೆಸ್​ ಶಾಸಕ ರಾಜು ಕಾಗೆ ವಿವಾದ ಹುಟ್ಟು ಹಾಕಿದ್ದಾರೆ. “ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ?” ಎಂದು ಹೇಳಿದ್ದಾರೆ. ಇದು ಸದ್ಯ ಬಿಜೆಪಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಗವಾಡ ತಾ| ಮಮದಾಪೂರ ಗ್ರಾಮದಲ್ಲಿ ಮಂಗಳವಾರ (ಏ.30) ರಂದು ನಡೆದಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ತೀರಿಕೊಂಡರೆ ಪ್ರಧಾನಿ ಅಭ್ಯರ್ಥಿ ಇಲ್ಲವೇ? 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲವೇ? ಎಂದು ಹೇಳಿದರು.

ಈಗಿನ ಯುವಕರು ಮೋದಿ ಮೋದಿ ಎಂದು ಹೇಳುತ್ತಾರೆ. ನೀವೇನು ಪ್ರಧಾನಿ ಮೋದಿಯವರನ್ನು ತೆಗೆದುಕೊಂಡು ನೆಕ್ಕುತ್ತೀರಾ? ಇಲ್ಲಿ ಯಾವುದೇ ಸಮಸ್ಯೆ ಆದರೂ ಪ್ರಧಾನಿ ಮೋದಿ ಬರಲ್ಲ, ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿಗೆ 3 ಸಾವಿರ ಕೋಟಿ ರೂ. ವಿಮಾನ ಇದೆ. ನರೇಂದ್ರ ಮೋದಿ 4 ಲಕ್ಷ ರೂ. ಸೂಟ್ ಹಾಕಿಕೊಳ್ಳುತ್ತಾರೆ ಎಂದರು.

ಇದು ಸದ್ಯ ರಾಜಕೀಯ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

 

Font Awesome Icons

Leave a Reply

Your email address will not be published. Required fields are marked *