ಬಿಜೆಪಿಯ ʻಪಾಕೈಸ್ಥಾನ್‌ʼ ಟ್ವೀಟ್‌ಗೆ ಸಿಟ್ಟಿಗೆದ್ದ ಕಾಂಗ್ರೇಸ್‌

ಬೆಂಗಳೂರು:  ಕಾಂಗ್ರೇಸ್‌ ಮತ್ತು ಬಿಜೆಪಿ ನಡುವಿನ ವಾಗ್ವಾದ ಇದೀಗ ಸೋಶಿಯಲ್‌ ಮೀಡಿಯಾದಲ್ಲೂ ಫೈಟ್‌ ಮಾಡುತ್ತಿವೆ. ರಾಜ್ಯಸಭೆ ಚುನಾವಣೆಯ ಗೆಲುವಿನ ವಿಜಯೋತ್ಸವ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲೇ ಕೆಲವರು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎಂಬ ಘಟನೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರಿ ಸಂಘರ್ಷಕ್ಕೇ ಕಾರಣವಾಗಿದೆ. ಆ ಹೇಳಿಕೆಯ ವಿರುದ್ದ ಬಿಜಿಪಿ ನಾಯಕರು ಸಿಡಿಮಿಡಿ ಗೊಂಡಿದ್ದಾರೆ. ಹಾಗೂ ದೊಡ್ಡ ಮಟ್ಟದ ಪ್ರತಿಭಟನೆ ಕೂಡ ಬಿಜೆಪಿ ನಡೆಸಿತ್ತು.

ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡಾ ತಿರುಗೇಟು ನೀಡುತ್ತಿದೆ. ಈ ಜಟಾಪಟಿ ಸೋಶಿಯಲ್‌ ಮೀಡಿಯಾದಲ್ಲೂ ಮುಂದುವರಿದಿದೆ.
ಕಾಂಗ್ರೆಸ್‌ ಈ ಕುರಿತು, ಇದೊಂದು ಸುಳ್ಳು ಆರೋಪ. ನಸೀರ್‌ ಸಾಬ್‌ ಜಿಂದಾಬಾದ್‌ ಎಂದು ಹೇಳಿದ್ದನ್ನು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಹೇಳಿದಂತೆ ಬಿಂಬಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದೆ. ಇದಕ್ಕೆ ಬಿಜೆಪಿ ಜಗ್ಗದೆ ತಕ್ಕ ಪ್ರತಿಕ್ರಿಯೆ ನೀಡಿದೆ. ಈ ನಡುವೆ, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಒಂದು ಪೋಸ್ಟ್‌ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರಿ ಸಮರಕ್ಕೆ ಕಾರಣವಾಗಿದೆ.

ಕಾಂಗ್ರೆಸ್​ ಚಿಹ್ನೆಯಾದ ಹಸ್ತವನ್ನ ಬಳಸಿ ಪಾ‘ಕೈ’ಸ್ತಾನ ಎಂದು ಬಿಜೆಪಿ ಪೋಸ್ಟ್ ಮಾಡಿ ಕಾಂಗ್ರೇಸ್‌ನ್ನು ಈ ಮೂಲಕ ಟೀಕಿಸಿದೆ. ಭಾರತದಲ್ಲಿ ಪಾಕಿಸ್ತಾನವನ್ನು ಕಾಂಗ್ರೆಸ್‌ ಬೆಂಬಲಿಸುತ್ತಿದೆ. ಹೀಗಾಗಿ ಈ ಕೈಯನ್ನು ಹೆಡೆಮುರಿ ಕಟ್ಟಿ ಎಂಬರ್ಥದಲ್ಲಿ ಸಂದೇಶವನ್ನು ಹಾಕಿದೆ.
ಅಲ್ಲದೆ, ಕಾಂಗ್ರೆಸ್‌ ಪಕ್ಷದ ಚಿಹ್ನೆ ಹಸ್ತಕ್ಕೆ ಹಸಿರು ಬಣ್ಣ ಹಾಗೂ ಪಾಕ್‌ ಬಾವುಟವನ್ನು ಚಿತ್ರಿಸಿ ಹರಿಬಿಡಲಾಗಿದೆ. ಅದಕ್ಕೆ ಪಾಕೈಸ್ತಾನ ಎಂದು ವಿವರಣೆ ನೀಡಲಾಗಿದೆ.

ಈ ಪೋಸ್ಟರ್‌ ನೋಡಿ ಸಿಡಿದೆದ್ದ ಕಾಂಗ್ರೇಸ್‌ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಠಿಣ ಕ್ರಮ ಜರುಗಿಸುವುದು ನಿಶ್ಚಿತ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದೆ.

ಈ ನಡುವೆ, ಕಾಂಗ್ರೆಸ್ ಎಚ್ಚರಿಕೆಗೆ ಮತ್ತೆ ತಿರುಗೇಟು ನೀಡಿದ ಬಿಜೆಪಿ, ‘ನೀವು ದೂರು ದಾಖಲಿಸುವುದು ಪಾಕ್​ನಲ್ಲೋ ಅಥವಾ ಭಾರತದಲ್ಲೋ? ಎಂದು ಕಾಂಗ್ರೆಸ್ ಎಚ್ಚರಿಕೆಗೆ ಮತ್ತೆ ರಾಜ್ಯ ಬಿಜೆಪಿ ಘಟಕ ಟಾಂಗ್ ನೀಡಿದೆ.

Font Awesome Icons

Leave a Reply

Your email address will not be published. Required fields are marked *