ಹೈದರಾಬಾದ್: ಹೈದರಾಬಾದ್ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಪ್ರಚಾರ ಮಾಡುವಾಗ ಮಹಿಳಾ ಎಎಸ್ಐಯೊಬ್ಬರು ತಬ್ಬಿಕೊಂಡು ಥ್ಯಾಂಕ್ಸ್ ನೀಡಿದ್ದರಿಂದ ಅಮಾನತುಗೊಂಡಿದ್ದಾರೆ.
ಸೈದಾಬಾದ್ನ ಎಎಸ್ಐ ಪೋಲೀಸ್ ಠಾಣೆಯ ಎಎಸ್ಐ ಉಮಾದೇವಿಯವರನ್ನು ಹೈದರಾಬಾದ್ ನಗರದ ಪೊಲೀಸ್ ಕಮಿಷನರ್ ಕೆ.ಶ್ರೀನಿವಾಸ್ ರೆಡ್ಡಿಯವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸೈದಾಬಾದ್ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಭದ್ರತೆಗಾಗಿ ಮಹಿಳಾ ಎಎಸ್ಐ ಉಮಾದೇವಿಯವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಪ್ರಚಾರ ಮಾಡುವಾಗ ಬಿಜೆಪಿ ಅಭ್ಯರ್ಥಿಯನ್ನು ಕಂಡು ಮುಗುಳು ನಗು ನಕ್ಕು, ಕೈ ಕುಲುಕಿ, ಅಪ್ಪಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಅಲ್ಲದೇ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಥ್ಯಾಂಕ್ಸ್ ನೀಡಿದ್ದಕ್ಕೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರೆಂದು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
Hyderabad City Police Commissioner K. Sreenivasa Reddy suspended a woman Assistant Sub Inspector of Saidabad police station for shaking hands and hugging Hyderabad BJP Lok Sabha candidate Madhavi Latha during her campaign in Saidabad.
Read the complete article:… pic.twitter.com/Q3fSMtJ0hV
— The Siasat Daily (@TheSiasatDaily) April 22, 2024