ಬಿಜೆಪಿ ಅಭ್ಯರ್ಥಿಗೆ ಥ್ಯಾಂಕ್ಸ್​ ಕೊಟ್ಟು, ತಬ್ಬಿಕೊಂಡಿದ್ದಕ್ಕೆ ಮಹಿಳಾ ಎಎಸ್‌ಐ ಅಮಾನತು

ಹೈದರಾಬಾದ್:​ ಹೈದರಾಬಾದ್​ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಪ್ರಚಾರ ಮಾಡುವಾಗ ಮಹಿಳಾ ಎಎಸ್‌ಐಯೊಬ್ಬರು ತಬ್ಬಿಕೊಂಡು ಥ್ಯಾಂಕ್ಸ್​ ನೀಡಿದ್ದರಿಂದ ಅಮಾನತುಗೊಂಡಿದ್ದಾರೆ.

ಸೈದಾಬಾದ್‌ನ ಎಎಸ್‌ಐ ಪೋಲೀಸ್ ಠಾಣೆಯ ಎಎಸ್‌ಐ ಉಮಾದೇವಿಯವರನ್ನು ಹೈದರಾಬಾದ್​ ನಗರದ ಪೊಲೀಸ್ ಕಮಿಷನರ್ ಕೆ.ಶ್ರೀನಿವಾಸ್ ರೆಡ್ಡಿಯವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸೈದಾಬಾದ್​ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಭದ್ರತೆಗಾಗಿ ಮಹಿಳಾ ಎಎಸ್‌ಐ ಉಮಾದೇವಿಯವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಪ್ರಚಾರ ಮಾಡುವಾಗ ಬಿಜೆಪಿ ಅಭ್ಯರ್ಥಿಯನ್ನು ಕಂಡು ಮುಗುಳು ನಗು ನಕ್ಕು, ಕೈ ಕುಲುಕಿ, ಅಪ್ಪಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಅಲ್ಲದೇ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಥ್ಯಾಂಕ್ಸ್​ ನೀಡಿದ್ದಕ್ಕೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರೆಂದು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *