ಬಿಜೆಪಿ 17, ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ದೆಹಲಿ: ಬಿಹಾರದಲ್ಲಿ ಎನ್‌ಡಿಎ ಕೂಟದ  ಸೀಟು ಹಂಚಿಕೆ ಸೂತ್ರ ಅಂತಿಮವಾಗಿದ್ದು, ಬಿಜೆಪಿ 17 ಹಾಗೂ ಜೆಡಿಯು  ಪಕ್ಷ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ತಿಳಿಸಿದ್ದಾರೆ.

ಮೈತ್ರಿಕೂಟದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹಾ ಅವರ ಆರ್‌ಎಲ್‌ಎಂ ತಲಾ ಒಂದು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಎಲ್‌ಜೆಪಿಯ ಭದ್ರಕೋಟೆಯಾದ ನಾವಡಾದಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಗಯಾ ಮತ್ತು ಕರಕಟ್‌ನ ಜಾಗದಲ್ಲಿ ನಿತೀಶ್ ಕುಮಾರ್‌ನ ಜೆಡಿಯುಗೆ ಶಿಯೋಹರ್ ಅನ್ನು ನೀಡಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸೋತಿದ್ದ ಕಿಶನ್‌ಗಂಜ್‌ ಕೂಡ ಜೆಡಿಯು ಪಾಲಾಗಿದೆ.

ಮೂಲಗಳ ಪ್ರಕಾರ ನಿತೀಶ್ ಕುಮಾರ್ ಅವರು ಶಿಯೋಹರ್ ಸ್ಥಾನವನ್ನು ಪಡೆಯಲು ತೀವ್ರ ಲಾಬಿ ನಡೆಸಿದ್ದಾರೆ, ಅಲ್ಲಿಂದ ಇಂದು ಸಂಜೆ ಪಕ್ಷಕ್ಕೆ ಸೇರ್ಪಡೆಗೊಂಡ ಲವ್ಲಿ ಆನಂದ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

Font Awesome Icons

Leave a Reply

Your email address will not be published. Required fields are marked *