ಬಿಸಿ ಗಾಳಿಗೆ ಕರ್ನಾಟಕದ ಜನ ತತ್ತರ; ಯಾವಾಗ ಮಳೆ ?

ಬೆಂಗಳೂರು: ಸೂರ್ಯನ ಶಾಖಕ್ಕೆ ರಾಜ್ಯ ಕಾದ ಕಾವಲಿಯಂತಾಗಿದೆ. ರಣ ಬಿಸಿಲಿನ ಉರಿ ಶೆಕೆ ಜನರನ್ನ ತತ್ತರಿಸಿದೆ. ಈಗಾಗಲೇ ದಾಖಲೆ ಬರೆದಿರೋ ತಾಪಮಾನ ಜನರನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಅತ್ತ, ಬೆವರಿಳಿಸೋ ಬಿಸಿ ಮಂದಿಯನ್ನ ಆಸ್ಪತ್ರೆಗೆ ಸೇರಿಸ್ತಿದೆ.

ರಾಜ್ಯದಲ್ಲಿ ಕಳೆದ ಒಂದು ವಾರದಿಂದ 40 ಡಿಗ್ರಿ ಆಸುಪಾಸಿನಲ್ಲೇ ತಾಪಮಾನ ದಾಖಲಾಗ್ತಿದೆ. ಪರಿಣಾಮ ಅತಿಯಾದ ಒಣಹವೆ, ಸನ್​ಸ್ಟ್ರೋಕ್​, ಮೈಗ್ರೇನ್​, ಮೂಗಿನಲ್ಲಿ ರಕ್ತಸ್ರಾವ. ಹೀಗೆ ನಾನಾ ಸಮಸ್ಯೆಗಳಿಂದ ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಅತ್ತ, ಆಸ್ಪತ್ರೆಗಳು ಕೂಡ ಪ್ರತ್ಯೇಕ ವಾರ್ಡ್​ ಮಾಡಿಕೊಂಡು ರೋಗಿಗಳನ್ನ ವೆಲ್​ಕಂ ಮಾಡೋಕೆ ರೆಡಿಯಾಗಿವೆ.

ಇನ್ನು, ರಾಜಧಾನಿಯ ಬೀರು ಬಿಸಿಲು ಕಡಿಮೆಯಾಗೋ ಲಕ್ಷಣವೇ ಕಾಣಿಸ್ತಿಲ್ಲ. ಸತತ ಒಂದು ವಾರ ಸಿಲಿಕಾನ್ ಸಿಟಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜನರೆಲ್ಲಾ ಮಳೆರಾಯ ಬಾರಯ್ಯ ಅಂತಾ ವರುಣನ ಜಪದಲ್ಲಿ ಮುಳುಗಿದ್ದಾರೆ.

ಸದ್ಯಕ್ಕೆ ಮಳೆಯ ಸೂಚನೆಯೂ ಕಾಣದೆ ಜನ ಕಂಗಾಲಾಗಿದ್ದಾರೆ. ಬಿಸಿ ಗಾಳಿಗೆ ತತ್ತರಿಸುತ್ತಿದ್ದಾರೆ. IMD ಪ್ರಕಾರ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ತುಮಕೂರು, ಗದಗ, ಮಂಡ್ಯ, ಬಳ್ಳಾರಿ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಬಿಸಿ ಗಾಳಿಯ ಅಲೆ ಹೆಚ್ಚಾಗುವ ಸಂಭವವಿದೆ. ಇದೇ 29ರವರೆಗೂ ರಾಜ್ಯದ ಬಹುತೇಕ ಕಡೆ ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಏ.30ರಿಂದ ರಾಜ್ಯದ ವಿವಿಧೆಡೆ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 5 ದಿನಗಳು ರಾಜ್ಯದಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಂಭವವಿದೆ. ಇದೇ 29ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವಿರುವ ಸಾಧ್ಯತೆಯಿದೆ ಎಂದು ಐಎಂಡಿ ಇಲಾಖೆ ಹೇಳಿದೆ.

 

 

Font Awesome Icons

Leave a Reply

Your email address will not be published. Required fields are marked *