ಬೀದರ್ ದಕ್ಷಿಣದಲ್ಲಿ ಸಾಗರ್ ಖಂಡ್ರೆ ಬಿರುಸಿನ ಪ್ರಚಾರ

ಬೀದರ್ : ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದರು. ಕಮಠಾಣ, ಕಾಡವಾದ, ಚಟ್ನಳ್ಳಿ, ಮರಕುಂದಾ, ಸಿಂದೋಲ್, ಬರೂರ ಹಾಗೂ ಮನ್ನಳ್ಳಿ ಗ್ರಾಮಗಳಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಿ ಮತಯಾಚಿಸಿದರು.

ತಮ್ಮನ್ನು ಆಯ್ಕೆಗೊಳಿಸಿದರೆ ಜಿಲ್ಲೆಯ ಜನರ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುವೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗಾಗಲೇ ಘೋಷಿಸಿದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಲಿದೆ’ ಎಂದು ತಿಳಿಸಿದರು.

‘ಬೀದರ್ ಕ್ಷೇತ್ರದ ಅಭಿವೃದ್ಧಿಗಾಗಿ ಮತದಾರರು ಸಾಗರ್ ಖಂಡ್ರೆ ಅವರನ್ನು ಬೆಂಬಲಿಸಬೇಕು’ ಎಂದು ಮಾಜಿ ಶಾಸಕ ಅಶೋಕ್ ಖೇಣಿ ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಪಕ್ಷದ ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ, ಪ್ರಮುಖರಾದ ಕರೀಂಸಾಬ ಕಮಠಾಣ, ತನ್ವಿರ್ ಅಹಮ್ಮದ್ ಖಾನ್, ಮುಜೀಬ್ ಪಟೇಲ್, ಸಂತೊಷ ಪಾಟೀಲ, ಸೈಯದ್ ಸಮಿಯೊದ್ದಿನ್, ಮಹೇಶ ಚಿಂತಾಂಣಿ, ಬಸವರಾಜ ಭತಮುರ್ಗೆ, ಫೆರೋಜ್‍ಖಾನ್ ಮೊದಲಾದವರು ಹಾಜರಿದ್ದರು.

ಮಳೆಯಲ್ಲೇ ಸಭೆ: ಮರಕುಂದಾದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ನಡೆಯುತ್ತಿದ್ದಾಗ ಮಳೆ ಸುರಿಯಲಾರಂಭಿಸಿತು. ಟೆಂಟ್‍ನಿಂದ ನೀರು ಜಿನುಗುತ್ತಿದ್ದರಿಂದ ಬೆಂಬಲಿಗರು ವೇದಿಕೆಯಲ್ಲಿದ್ದ ನಾಯಕರ ಮೇಲೆ ಕೊಡೆ ಹಿಡಿದರು.

Font Awesome Icons

Leave a Reply

Your email address will not be published. Required fields are marked *