ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

ಬೀದರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಾದ ಬಸವಕಲ್ಯಾಣ, ಹುಮನಾಬಾದ, ಬೀದರ್ ದಕ್ಷಿಣ, ಬೀದರ್, ಭಾಲ್ಕಿ, ಔರಾದ ಹಾಗೂ ಕಲಬುರಗಿ ಜಿಲ್ಲೆಯ ಎರಡು ಕ್ಷೇತ್ರಗಳಾದ ಚಿಂಚೋಳಿ ಮತ್ತು ಆಳಂದ ವಿಧಾನ ಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.

ಬೀದರ್ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು 30 ಸಖಿ ಮತಗಟ್ಟೆಗಳು. 6 ಯುವ ಮತಗಟ್ಟೆಗಳು. 6 ವಿಶೇಷ ಚೇತನರ ಮತಗಟ್ಟೆಗಳು ಹಾಗೂ 6 ಥೀಮ್ ಬೇಸ ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತು. ಮತದಾನ ಮಾಡಲು ಬರುವವರಿಗೆ ಈ ವಿಶೇಷ ಮತಗಟ್ಟೆಗಳು ಗಮನಸೆಳೆದವು. ಸಖಿ ಮತಗಟ್ಟೆಗಳಲ್ಲಿ ಮಹಿಳೆಯರೆ ಮತಗಟ್ಟೆ ಸಿಬ್ಬಂದಿಗಳಿದ್ದು ಅವರು ಪಿಂಕ್. ಸಿರೇಗಳನ್ನು ಧರಿಸಿದ್ದರು ಇಡೀ ಮತಗಟ್ಟೆಗಳು ಪಿಂಕ್ ಬಣ್ಣದಲ್ಲಿ ಅಲಂಕಾರವಾಗಿರುವುದು ವಿಶೇಷವಾಗಿ ಕಂಡು ಬಂತು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಬೀದರ್ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಂತಿಯುತವಾಗಿ ಮತದಾನ ನಡೆಸುವಂತೆ ಚುನಾವಣಾ ಸಿಬ್ಬಂದಿಗಳಿಗೆ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದೆ. ಬಿಸಿಲು ಹೆಚ್ಚಾಗಿ ಇರುವುದರಿಂದ ಜನರಿಗೆ ತೊಂದರೆಯಾಗದಂತೆ ಮತಗಟ್ಟೆಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪೊಲೀಸ್ ಸಿಬ್ಬಂದಿಗಳು, ಬಿ.ಎಲ್.ಓ ಹಾಗೂ ಹೋಮಗಾರ್ಡ್ ಮತ್ತು ಆಶಾ ಕಾರ್ಯಕರ್ತೆಯರು ಮತದಾನ ಮಾಡಲು ಬರುವವರಿಗೆ ಸಹಾಯ ಮಾಡುತ್ತಿದ್ದಾರೆ. ಶಾಂತಿಯುತವಾಗಿ ಮತದಾನದಲ್ಲಿ ಭಾಗವಹಿಸಿದ ಬೀದರ್ ಲೋಕಸಭಾ ಕ್ಷೇತ್ರದ ಜನತೆಗೆ ನಾನು ಅಭಿನಂದನೆಗಳು ಸಲ್ಲಿಸುತ್ತೆನೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮತದಾನ ಮಾಡಲು ಬರುವ ಜನರು ಬಂದು ಮತದಾನ ಮಾಡಲು ಬೀದರ ಲೋಕಸಭಾ ಕ್ಷೇತ್ರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೀದರ ಜಿಲ್ಲೆ ಮೊದಲಿನಿಂದಲೂ ಶಾಂತಿ ಪ್ರೀಯ ಜಿಲ್ಲೆಗೆ ಹೆಸರಾಗಿದೆ ಎಂದು ಹೇಳಿದರು.

ಬೆಳಿಗ್ಗೆ 7 ರಿಂದ 9 ಗಂಟೆಗಳವರೆಗೆ ಶೇ. 8.9 ಪ್ರತಿಶತ ಮತದಾನ. 9 ರಿಂದ 11 ಗಂಟೆಗಳವರೆಗೆ ಶೇ. 21.92 ಪ್ರತಿಶತ, 11 ರಿಂದ 1 ಗಂಟೆಗಳವರೆಗೆ ಶೇ. 37.97 ಪ್ರತಿಶತ, ಮಧಾಹ್ನ 1 ಗಂಟೆಯಿಂದ 3 ಗಂಟೆಗಳವರೆಗೆ ಶೇ. 47.58 ಪ್ರತಿಶತ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಗಳ ವರೆಗೆ ಶೇ. 60.2 ಪ್ರತಿಶತ ಮತದಾನವಾಗಿದೆ. ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಮತದಾನ ನಡೆಯಿತು.

Font Awesome Icons

Leave a Reply

Your email address will not be published. Required fields are marked *