ಭಾರತದ ನಾಯಕತ್ವ ಕೊಂಡಾಡಿದ ವಿಶ್ವದ ದೈತ್ಯ ಕಂಪನಿಯ ಸಿಇಒ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಜಗತ್ತಿನಾದ್ಯಂತ ಹೆಚ್ಚುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈಗ ಅಮೆರಿಕಕ್ಕೂ ನರೇಂದ್ರ ಮೋದಿಯಂತಹ ನಾಯಕ ಬೇಕು ಎಂದು ಅಲ್ಲಿನ ಜನರೂ ಮಾತನಾಡಿಕೊಳ್ಳುತ್ತಿದ್ದಾರೆ.

ವಿಶ್ವದ ದೈತ್ಯ ಜೆಪಿ ಮೋರ್ಗಾನ್ ಚೇಸ್ ಆಯಂಡ್ ಕಂ ಸಿಇಒ ಜೇಮಿ ಡಿಮನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.

ಪ್ರಧಾನಿ ಮೋದಿಯ ಕಾರ್ಯವೈಖರಿಯನ್ನು ಕೊಂಡಾಡಿರುವ ಅವರು, ನರೇಂದ್ರ ಮೋದಿ ಅವರು ಭಾರತಕ್ಕಾಗಿ ಅಸಾಮಾನ್ಯವಾದ ಕೆಲಸವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಎಕನಾಮಿಕ್ ಕ್ಲಬ್ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಜೆಪಿ ಮೋರ್ಗಾನ್ ಸಿಇಒ ಜೇಮಿ ಡಿಮನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ್ದು, ಮೋದಿ ಅವರು ಭಾರತದಲ್ಲಿ ಅತ್ಯದ್ಭುತವಾದ ಕಾರ್ಯಗಳನ್ನು ಮಾಡುತ್ತಿದ್ದಾರೆ. 400 ಮಿಲಿಯನ್ ಜನರನ್ನು ಅವರು ಬಡತನದಿಂದ ಹೊರಗೆ ತಂದಿದ್ದಾರೆ. ಮೋದಿ ಅವರು ಅತ್ಯಂತ ಗಟ್ಟಿತನದಿಂದ ಕೂಡಿದ ಮನುಷ್ಯ. ಅತ್ಯಂತ ಕಷ್ಟಕರ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಬೇಸಿಗೆಯಲ್ಲಿ ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿರುವ ಜೆಪಿ ಮೋರ್ಗಾನ್ ಮುಖ್ಯಸ್ಥ ಜೇಮಿ ಡಿಮೊನ್, ಭಾರತದಲ್ಲಿ 700 ಮಿಲಿಯನ್ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಮತ್ತು ಅವರ ಪಾವತಿಗಳನ್ನು ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಭಾರತವು ನಂಬಲಾಗದ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ಹೊಂದಿದೆ. ಪ್ರಧಾನಿ ಮೋದಿ ಕಠಿಣ ಮತ್ತು ದೇಶದ ಕಟ್ಟುನಿಟ್ಟಾದ ಅಧಿಕಾರಶಾಹಿ ವ್ಯವಸ್ಥೆಯನ್ನು ಮುರಿಯುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.

ಭಾರತದಲ್ಲಿ ನಿಜಕ್ಕೂ ನಂಬಲು ಸಾಧ್ಯವಾಗದಂತಾ ಮೂಲ ಸೌಕರ್ಯ ವ್ಯವಸ್ಥೆ ಇದೆ ಎಂದಿರುವ ಜೇಮಿ ಡಿಮೊನ್, ಇದೀಗ ಇಡೀ ದೇಶವನ್ನೇ ಮೇಲೆತ್ತಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವೂ ಕೇವಲ ಒಬ್ಬ ವ್ಯಕ್ತಿಯಿಂದ ಆಗುತ್ತಿದೆ. ಏಕೆಂದರೆ ಆತ ಗಟ್ಟಿತನ ಹೊಂದಿದ್ದಾನೆ. ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿದ ವಿಚಾರದಲ್ಲೂ ಪ್ರಧಾನಿ ಮೋದಿ ನಡೆ ಅನುಕರಣೀಯ ಎಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *