ಮತದಾನದ ಹಕ್ಕು ಚಲಾಯಿಸಿದ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನದ ಭಾಗವಾಗಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ವೋಟಿಂಗ್ ನಡೆಯುತ್ತಿದೆ.

ಸ್ಥಳೀಯ ಶಾಸಕ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಕುಟುಂಬ ಜೊತೆ ನಗರದ ಎಸ್ ಎಸ್ ಶಾಲೆ ಮತಗಟ್ಟೆಗೆ ಬಂದು ಸಾಲಲ್ಲಿ ನಿಂತು ಮತ ನೀಡಿದ್ದಾರೆ.

ಯತ್ನಾಳ್ ಹಾಗೂ ಅವರ ಪತ್ನಿ ಮತ ಚಲಾಯಿಸಿದ ಬಳಿಕ ತಮ್ಮ ಬೆರಳಿಗೆ ಹಚ್ಚಿದ ಇಂಕ್ ಮಾರ್ಕ್ ಅನ್ನು ಮಾಧ್ಯಮದ ಕೆಮೆರಾಗಳಿಗೆ ತೋರಿಸಿದರು. ಯಾರೋ ಒಬ್ಬ ಪತ್ರಕರ್ತರು, ಸಾರ್ ಇದು ಪ್ರಚಾರ ಅನಿಸಲ್ವಾ? ಅಂತ ನಗೆಯಾಡಿದರು. ಅದಕ್ಕೆ ಶಾಸಕರು ಗಂಭೀರವಾಗಿ, ವೋಟು ಹಾಕಿದ್ದನ್ನು ತೋರಿಸುತ್ತಿದ್ದೇನೆ, ಅಷ್ಟೇ, ಎಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *