ದುಬೈ: ಫ್ಯಾಶನ್ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಿಸೆಸ್ ಯೂನಿವರ್ಸ್ ಶ್ರೀಮತಿ ಸುಧಾ ನೇತೃತ್ವದ ಸುಧಾ ವೆಂಚರ್ಸ್ ಸಂಸ್ಥೆಯ ಆಯೋಜನೆಯಲ್ಲಿ ನಡೆದ ಮಿಸ್ಟರ್, ಮಿಸ್ ಮತ್ತು ಮಿಸೆಸ್ ಸ್ಟಾರ್ ಯೂನಿವರ್ಸ್ 2023 ಹಾಗೂ ಇಂಟರ್ನ್ಯಾಷನಲ್ ಪ್ರೈಡ್ ಅವಾರ್ಡ್ 2023 ಅದ್ಭುತವಾದ ಯಶಸ್ಸಿನೊಂದಿಗೆ ವರ್ಣರಂಜಿತ ತೆರೆ ಕಂಡಿತು. ಮೊಟ್ಟಮೊದಲ ಬಾರಿಗೆ ಯುನೈಟೆಡ್ ಅರಬ್ ಇಮೆರೆಟ್ಸ್ ನ ದುಬೈನಲ್ಲಿ ಇಂಡೋ-ಇಂಟರ್ನ್ಯಾಷನಲ್ ಫ್ಯಾಶನ್ ಕಾರ್ನಿವಲ್ ಮತ್ತು ಅವಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಪ್ರೈಡ್ ಅವಾರ್ಡ್ಸ್ ಸೌಂದರ್ಯ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.
ಖ್ಯಾತ ಬಾಲಿವುಡ್ ಸೆಲೆಬ್ರಿಟಿ ನಟ ಅಫ್ತಾಬ್ ಶಿವದಾಸನಿ ಅವರು ಸೌಂದರ್ಯ ಸ್ಪರ್ಧೆ ವಿಜೇತರಿಗೆ ಕ್ರೌನ್ ಹಾಕಿದರು ಹಾಗೂ ಎಲ್ಲಾ ವಿನ್ಯಾಸಕರು ಮತ್ತು ಸಾಧಕರಿಗೆ ಇಂಟರ್ ನ್ಯಾಷನಲ್ ಪ್ರೌಡ್ ಪ್ರಶಸ್ತಿಗಳನ್ನು ವಿತರಿಸಿದರು. ವಿಶ್ವದ 28 ದೇಶಗಳ ಸ್ಪರ್ಧಿಗಳು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಮಿಸೆಸ್ ಸ್ಟಾರ್ ಯೂನಿವರ್ಸ್ ವಿಭಾಗದಲ್ಲಿ ಮಂಗಳೂರಿನ ಶ್ರೀಮತಿ ಮಂಗಳಾ ಸ್ವಾತಿ ವಿಜೇತರಾದರೆ, ನೇಪಾಳದ ಶ್ರೀಮತಿ ಶೃಷ್ಟಿ ಮಹರ್ಜನ್ ಮಿಸ್ ಸ್ಟಾರ್ ಯೂನಿವರ್ಸ್ ಕ್ರೌನ್ ಅನ್ನು ಮುಡಿಗೇರಿಸಿಕೊಂಡರು. ದೀಪಕ್ ಸೋಮಶೇಖರ್ ಅವರು ಮಿಸ್ಟರ್ ಯೂನಿವರ್ಸ್ ಪ್ರಶಸ್ತಿಗೆ ಭಾಜನರಾದರು.
ಡಾ. ಇಶಾ ಫರ್ಹಾನ್ ಖುರೈಶಿ, ಮಿಸ್. ಯೂನಿವರ್ಸ್ ಸಾಲಿಡಾರಿಟಿ UAE ಯುನೈಟೆಡ್ ನೇಷನ್ಸ್, ಮಿಸಸ್ ಯೂನಿವರ್ಸ್ ನೇಪಾಳ 2019 ಖ್ಯಾತಿಯ ಶ್ರೀಮತಿ ಅನಿಲಾ ಶ್ರೇಷ್ಠಾ, ಮಿಸೆಸ್ ಯೂನಿವರ್ಸ್ ಮ್ಯಾನ್ಮಾರ್ ಪುರಸ್ಕೃತೆ ಹನಿ ಚೋ, ಎಮಿರೇಟ್ಸ್ ಹೋಲ್ಡಿಂಗ್ ಗ್ರೂಪ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಹನೀಫ್ ಶೇಖ್, ಮಿಸ್ಟರ್ ಯುಎಇ ಇಂಟರ್ನ್ಯಾಷನಲ್-2022 ಖ್ಯಾತಿಯ ಗೌತಮ್ ಬಂಗೇರ ತೀರ್ಪುಗಾರರಾಗಿದ್ದರು.
ಫ್ಯಾಶನಬಲ್ ಸುತ್ತಿನಲ್ಲಿ ಅಜ್ಮಾನ್ ನ ಸೈಯದಾ ಫ್ಯಾಶನ್ ಸ್ಪರ್ಧಿಗಳಿಗಾಗಿ ಹಾಗೂ ರೂಪದರ್ಶಿಗಳಿಗಾಗಿ ತಾವು ವಿನ್ಯಾಸಗೊಳಿಸಿದ ವಿಶೇಷ ವಿನ್ಯಾಸಗಳನ್ನು ಪ್ರದರ್ಶಿಸಿದರು. ಪಾರ್ಟಿ ಗೌನ್ ಸುತ್ತಿನಲ್ಲಿ ಪ್ರಿಯಾ ಫ್ಯಾಶನ್ಸ್ ಬೊಟಿಕ್ ಒಡತಿ ಶ್ರೀಮತಿ ಪ್ರಿಯಾ ಫೆರ್ನಾಂಡಿಸ್ ತಮ್ಮ ಆಕರ್ಷಕ ವಿನ್ಯಾಸಗಳ ಸಂಗ್ರಹವನ್ನು ಪ್ರದರ್ಶಿಸಿದರು.
ಮಿಸೆಸ್ ಯೂನಿವರ್ಸ್ ಚಾರ್ಮ್-2019 & ಮಿಸೆಸ್ ಈಸ್ಟ್ ಪೆಸಿಫಿಕ್ ಏಷ್ಯಾ ಸೇರಿದಂತೆ ಹತ್ತು ಹಲವು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವ, ಸುಧಾ ವೆಂಚರ್ಸ್‌ನ ಸಂಸ್ಥಾಪಕರು, ನಿರ್ದೇಶಕರು ಮತ್ತು ಸಂಘಟಕರಾದ ಮಿಸೆಸ್ ಯೂನಿವರ್ಸ್ ಸುಧಾ ಅವರು ಈ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ವಿವಿಧ ದೇಶಗಳ ಹಲವು ಕ್ಷೇತ್ರಗಳ ಗಣ್ಯರು, ಸೆಲೆಬ್ರಿಟಿಗಳು ಮತ್ತು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂಭ್ರಮಿಸಿದರು.
ಎಸ್.ವಿ ಫಿದಾ ಇಂಟರ್‌ನ್ಯಾಶನಲ್ ಬ್ಯೂಟಿ ಪೇಜೆಂಟ್ ಬ್ಯಾನರ್‌ನಡಿಯಲ್ಲಿ ಮಿಸೆಸ್ ಯೂನಿವರ್ಸ್ ಸುಧಾ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.