ಮೃತ ವ್ಯಕ್ತಿಯನ್ನ ಬ್ಯಾಂಕಿಗೆ ಕರೆತಂದ ಮಹಿಳೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬ್ರೆಜಿಲ್‌ : ಬ್ರೆಜಿಲ್’ನ ರಿಯೋ ಡಿ ಜನೈರೊದಲ್ಲಿ ಒಂದು ವಿಚಿತ್ರ ಮತ್ತು ಆಶ್ಚರ್ಯಕ ಘಟನೆ ನಡೆದಿದ್ದು ಓರ್ವ ಮಹಿಳೆ ಸಾಲದ ನಮೂನೆಯಲ್ಲಿ ಸಹಿ ಪಡೆಯಲು ಶವವನ್ನ ಬ್ಯಾಂಕಿಗೆ ವ್ಹೀಲ್ ಚೇರ್’ನಲ್ಲಿ ತರುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಕೆಗೆ ಸಾಲದ ಅವಶ್ಯಕತೆ ಇದ್ದ ಕಾರಣ ತನ್ನ ಹೆಸರಿನಲ್ಲಿ ಸಾಲ ಪಡೆಯಲು ಮೃತ ವ್ಯಕ್ತಿಯನ್ನು ವೀಲ್‌ಚ್ಹೇರ್‌ನಲ್ಲಿ ಕೂರಿಸಿಕೊಂಡು ಬಂದಿದ್ದಾಳೆ ಎಂದು ವರದಿ ತಿಳಿಸಿದೆ.

ಮಹಿಳೆ ಮೃತ ಪಿಂಚಣಿದಾರನ ತಲೆ ಎತ್ತಿ ಹಿಡಿದು ಕಾಗದದ ಮೇಲೆ ಸಹಿ ಮಾಡಿಸಲು ಪ್ರಯತ್ನಿಸುತ್ತಿದ್ದಳಾದರೂ ಸಾಧ್ಯವಾಗುತ್ತಿರಲಿಲ್ಲ ಆದರೂ ಪಟ್ಟುಹಿಡಿದು, ಮೃತ ವ್ಯಕ್ತಿಯ ಸಹಿಯನ್ನ ಪಡೆಯುವ ವ್ಯರ್ಥ ಪ್ರಯತ್ನದಲ್ಲಿ ವ್ಯಕ್ತಿಯ ಬೆರಳುಗಳ ನಡುವೆ ಪೆನ್ ಇರಿಸಿದಳು ಆದರೆ ಸಾಧ್ಯವಾಗದ ಕಾರಣ ಬ್ಯಾಂಕಿನ ಸಿಬ್ಬಂದಿ ಆತನ ಆರೋಗ್ಯದ ಬಗ್ಗೆ ವಿಚಾರಿಸಿದಾಗೆ ಆಕೆ ಅವರಿಗೂ ಹೆದರಿಸುತ್ತಾಳೆ ನಂತರ ಆ ವ್ಕಕ್ತಿ ಇರುವಿದೆ ಹೀಗೆ ಎಂದು ತಿಳಿಸುತ್ತಾಳೆ.

ವ್ಯಕ್ತಿಯ ಮಸುಕಾದ ನೋಟ ಹಾಗೂ ಯಾವುದೇ ಚಲನವಲನ ಇಲ್ಲದ್ದನ್ನು ಗಮನಿಸಿದ ಬ್ಯಾಂಕಿನ ಸಿಬ್ಬಂಧಿ ಅನುಮಾನಗೊಂಡು ತಕ್ಷಣ ಪೊಲೀಸರನ್ನ ಸಂಪರ್ಕಿಸಿದರು.

Font Awesome Icons

Leave a Reply

Your email address will not be published. Required fields are marked *