ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಂದೆಯಿಂದಲೇ ಮಗನ ಕೊಲೆ

ಬೆಂಗಳೂರು: ಬಸವೇಶ್ವರನಗರದಲ್ಲಿ ನಡೆದ ಯುವಕ ಯೋಗೇಶ್​ ಕೊಲೆ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಕುಡಿತದ ಚಟ ಬಿಡಿಸಲಾಗದೆ ತಂದೆ ಪ್ರಕಾಶ್​ ಮಗ ಯೋಗೇಶ್​ನನ್ನು ಕೊಲೆ ಮಾಡಿದ್ದಾನೆಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಪುತ್ರ ಯೋಗೇಶ್​ನನ್ನು​ ಹತ್ಯೆಗೈದು ಆತ್ಮಹತ್ಯೆ ಅಂತ ತಂದೆ ಪ್ರಕಾಶ್​ ಬಿಂಬಿಸಿದ್ದನು. ಮಗನ ಕುಡಿತದ ಚಟದಿಂದ ಬೇಸತ್ತು ಈ ಕೃತ್ಯ ವ್ಯಸಗಿದ್ದಾನೆ. ಯೋಗೇಶ್​ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತಿದ್ದನು. ಕುಡಿತದ ಚಟ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆ ನಡೆದು ಮಗನ ಕೊಲೆಯಲ್ಲಿ ಅಗತ್ಯವಾಗಿದೆ.

ಬುಧವಾರ (ಮಾ.06) ರಂದು ತಂದೆ-ಮಗನ ನಡುವೆ ಗಲಾಟೆನಡೆದು ತಂದೆ ಮಗನನ್ನು ಕೊಲೆ ಮಾಡಿದ್ದಾನೆ.

ಈ ಪ್ರಕರಣದ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದಾಗ ವಿಚಾರಣೆಗೆ ಮುಂದಾದ ಪೋಲಿಸ್ ಆರೋಪಿ ತಂದೆಯ ಬಂಡವಾಳ ಬರಲಾಗಿದೆ. ಬಸವೇಶ್ವರ ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *