ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್;‌ ಆಹಾರ ಕೊಟ್ಟು ಹೋಗುವಾಗ ಕೃತ್ಯ

ಬೆಂಗಳೂರು: ಆಹಾರ ಡೆಲಿವರಿ ಮಾಡಲು ಬಂದಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ ಮರಳುವ ವೇಳೆ ದುಬಾರಿ ಶೂ ಕದ್ದ ಘಟನೆ ಬೆಳಕಿಗೆ ಬಂದಿದೆ.

ದಕಿಣ ದೆಹಲಿಯಲ್ಲಿ ನಡೆದಿರುವ ಘಟನೆಯ ವೀಡಿಯೋವನ್ನು ರೋಹಿತ್‌ ಅರೋರಾ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸ್ನೇಹಿತನ ಮನೆಯಲ್ಲಿ ನಡೆದಿರುವ ಕಳ್ಳತನ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಸ್ವಿಗ್ಗಿ ಏನೂ ಕ್ರಮ ಕೈಗೊಂಡಿಲ್ಲ. ಆತನನ್ನು ಸಂಪರ್ಕಿಸಲೂ ಅನುಕೂಲ ಮಾಡಿಕೊಡಲಾಗುತ್ತಿಲ್ಲ ಎಂದು ದೂರುದಾರರು ಸ್ವಿಗ್ಗಿಯ ವಿರುದ್ಧ ಆರೋಪಿಸಿದ್ದಾರೆ.

ಮನೆಯಲ್ಲಿದ್ದ ಮಹಿಳೆಯ ಕೈಗೆ ಡೆಲಿವರಿ ಒಪ್ಪಿಸಿದ ಹುಡುಗ ಹೊರಡುವಾಗ ಹೊರಗಿದ್ದ ಶೂ(ನೈಕಿ) ಎತ್ತಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Font Awesome Icons

Leave a Reply

Your email address will not be published. Required fields are marked *