ಸರ್ಕಾರಿ ಆಸ್ಪತ್ರೆಯ ಕಾರಿಡಾರ್​ನಲ್ಲಿ ನರ್ಸ್ ವೊಬ್ಬರು ಸ್ಕೂಟಿಯಲ್ಲಿ ಓಡಾಟ

ಲಕ್ನೋ: ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ವೊಬ್ಬರು ಕಪ್ಪು ಕನ್ನಡಕ ಹಾಕಿಕೊಂಡು ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ನ ರೋಗಿಗಳ ಬಳಿ ಸ್ಕೂಟಿಯಲ್ಲಿ ಹೋಗಿ  ಚಿಕಿತ್ಸೆ ನೀಡುತ್ತಿರುವ ಘಟನೆಯು ಉತ್ತರ ಪ್ರದೇಶದ ಪಿಲಿಭಿತ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಕಾರಿಡಾರ್​ನಲ್ಲಿ ರೋಗಿ ಒಬ್ಬರು ಕುಳಿತುಕೊಂಡಿದ್ದು, ಇನ್ನು ಹಲವು ಜನರು ಓಡಾಡುತ್ತಿದ್ದಾರೆ. ಇದರ ಮಧ್ಯೆಯೇ ನರ್ಸ್​ ಬೈಕ್​ ಅನ್ನು ನುಗ್ಗಿಸಿಕೊಂಡು ಮತ್ತೊಂದು ವಾರ್ಡ್​ಗೆ ಹೋಗುತ್ತಿದ್ದು,  ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಸ್ಕೂಟಿಯಲ್ಲಿ ಆಸ್ಪತ್ರೆಯಲ್ಲಿ ಓಡಾಡುತ್ತಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಈ ಮಾಹಿತಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದು ತನಿಖೆಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ನರ್ಸ್ ಅವರ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ನರ್ಸ್ ವಾರ್ಡ್‌ನಿಂದ ವಾರ್ಡ್‌ಗೆ ಸ್ಕೂಟಿಯಲ್ಲಿ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಇರೋದು ಆಶ್ಚರ್ಯಕ್ಕೆ ಕಾರಣವಾಗಿದೆ.

Font Awesome Icons

Leave a Reply

Your email address will not be published. Required fields are marked *