ಸುತ್ತೂರು ಮಠವನ್ನ ನಾವು ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ- ಹೆಚ್.ಡಿ ಕುಮಾರಸ್ವಾಮಿ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಏಪ್ರಿಲ್,20,2024 (www.justkannada.in): ಸುತ್ತೂರು ಮಠವನ್ನ ನಾವು ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಸುತ್ತೂರು ಮಠಕ್ಕೆ  ಭೇಟಿಯ ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮಠಕ್ಕೆ ಬಂದರೂ ಈಗ ಕೆಲವರಿಗೆ  ಸ್ಪಷ್ಟೀಕರಣ ಕೊಡಬೇಕಾದ ಸ್ಥಿತಿ ನಮಗೆ ಬಂದಿದೆ. ನಾವು ಮೈಸೂರಿಗೆ ಬಂದಾಗಲೆಲ್ಲಾ ಮಠಕ್ಕೆ ಬರುತ್ತೇವೆ‌. ಮಠವನ್ನ ನಾವು ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಇವತ್ತು ನಮ್ಮ ಜೊತೆ ಮಂಡ್ಯ ಭಾಗದ ಕೆಲ ಮುಖಂಡರು ನಮ್ಮ ಜೊತೆ ಬಂದಿದ್ದಾರೆ. ಸ್ವಾಮೀಜಿಗಳ ಆಶೀರ್ವಾದ ಪಡೆಯುವುದಕ್ಕೆ ಎಲ್ಲರ ಬರುತ್ತಾರೆ‌. ಇದನ್ನು ಸ್ಪಷ್ಟಿಕರಣ ಕೊಡಬೇಕಾದ ಪರಿಸ್ಥಿತಿ ಬಂತು ಎಂದು  ಹೇಳಿದರು.

ಸಿಎಂ ಪ್ರಚಾರದ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯ.

ಸಿಎಂ ಸಿದ್ದರಾಮಯ್ಯ ಪ್ರಚಾರದ ಬಗ್ಗೆ ವ್ಯಂಗ್ಯವಾಡಿದ ಹೆಚ್.ಡಿ ಕುಮಾರಸ್ವಾಮಿ,  ನಿನ್ನೆ ರಾತ್ರಿ ಹಾಸನದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ‌. ಇವತ್ತು ಮಂಡ್ಯ ಕ್ಷೇತ್ರದಲ್ಲಿ ಎಬ್ಬಿಸಲು ಬರುತ್ತಿದ್ದಾರೆ. ಅಯ್ಯೋ ಎಬ್ಬಿಸಲಿ ಬಿಡಿ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೂ ಕುಮಾರಸ್ವಾಮಿ ಸೋಲುವುದು ಅಷ್ಟೇ ಸತ್ಯ ಅಂತಾ ಸಿಎಂ ಆದೇಶವೇ ಕೊಟ್ಟಿದ್ದಾರೆ. ಅಯ್ಯೋ ಪಾಪ ಫಲಿತಾಂಶ ಬಂದ ದಿನ ಸೂರ್ಯ ಚಂದ್ರನನ್ನ ಏನು ಮಾಡಬೇಕೊ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಸಂಸದೆ ಸುಮಲತಾ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಅವರು ಬಿಜೆಪಿ ಸೇರಿದ್ದಾರೆ. ಬಿಜೆಪಿಯವರು ಎಲೆಲ್ಲಿ ಹೇಳುತ್ತಾರೆ ಅಲಲ್ಲಿ ಪ್ರಚಾರಕ್ಕೆ ಹೋಗುತ್ತಾರೆ. ಇನ್ನೂ ನಾಲ್ಕು ದಿನ ಇದೇ ಬಿಜೆಪಿಯವರು ಮಂಡ್ಯಗೂ ಸಮಯ ನಿಗದಿ ಮಾಡಬಹುದು ಎಂದರು.

ಹುಬ್ಬಳ್ಳಿ ಗಲಾಟೆ ವಿಚಾರ, ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಕಾಂಗ್ರೆಸ್ ನ ಮನಸ್ಥಿತಿ ಏನು ಎಂಬುದಕ್ಕೆ ಇದು ಸಾಕ್ಷಿ. ಕಾಂಗ್ರೆಸ್ ಈ ವಿಚಾರವಾಗಿ ಜನರ ಮುಂದೆ ನಗ್ನವಾಗಿದೆ. ಸಿಎಂ ಮತ್ತು ಡಿಸಿಎಂ ಇಬ್ಬರು ಬಹಳ ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ. ಒಂದು ವರ್ಗದ ಓಲೈಕೆಯಿಂದಲೇ ಈ ರೀತಿ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಮೋದಿ ಹಾಡು ಬರೆದರು ಅಂಥ ಯುವಕನ ಮೇಲೆ ಮಾಡಿದ್ದಾರೆ ಅಂದರೇ ಪರಿಸ್ಥಿತಿ ಯಾವ ಹಂತಕ್ಕೆ ಹೋಗಿರಬಹುದು ನೋಡಿ. ಮೊದಲು ಟಿವಿಗಳಲ್ಲಿ ರಾತ್ರಿ ಹತ್ತು ಗಂಟೆ ಮೇಲೆ ಅಪರಾಧ ಸುದ್ದಿ ತೋರಿಸುತ್ತಿದ್ದರು. ಈಗ ಬೆಳಗ್ಗೆಯಿಂದಲೇ ಅಫರಾದ ಸುದ್ದಿ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಸ್ಥಿತಿ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕಿಡಿಕಾರಿದರು.

Key words: Sattur Math, politics, HD Kumaraswamy

Font Awesome Icons

Leave a Reply

Your email address will not be published. Required fields are marked *