ಸೊಳ್ಳೆ ‘ಟ್ವೀಟ್ ಕಳುಹಿಸುವ’ ಫೋಟೋ ವೈರಲ್‌

ವೈರಲ್: ನಾವು ಪ್ರತಿದಿನ ಸೋಶಿಯಲ್ ಮೀಡಿಯಾಗಳಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ.ಅದರಲ್ಲೂ ಕೆಲ ಪೋಸ್ಟ್‌ ಗಳು ನಿಮ್ಮನ್ನು ನಗುವಂತೆ ಮಾಡುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ತಲೆಯಲ್ಲೇ ಗಿರಕಿ ಹೊಡೆಯುತ್ತಿರುವಂತೆ ಮಾಡಿರುತ್ತದೆ.

ಅದೇ ರೀತಿ ಈ ಪೋಸ್ಟ್‌ ಕೂಡ ನಿಮ್ಮ ತಲೆಯಲ್ಲೇ ಗಿರಕಿ ಹೊಡೆಯಲು ಶುರು ಮಾಡಬಹುದು ನೋಡಿ. ಈ ದೃಶ್ಯ ನಿಮ್ಮ ಕೆಲಸದ ದಿನವನ್ನು ಮತ್ತಷ್ಟು ಹಗುರಗೊಳಿಸಲಿದೆ.

ಹೌದು. .  ಕಂಪ್ಯೂಟರ್ ನಲ್ಲಿ ಮುಂದೆ ಕುಳಿತು ಕೀಬೋರ್ಡ್ ಕೆಲಸ ಮಾಡುವ ನಮ್ಮಂತೆಯೇ ಸೊಳ್ಳೆಯೂ ಕೂಡ ಕೀಬೋರ್ಡ್ ನಲ್ಲಿ ಕೆಲಸ ಮಾಡಿದೆ ಎಂಬ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಪೋಸ್ಟ್ ಇದಾಗಿದೆ.

ಕೀ ಬೋರ್ಡ್ ನ ʼVʼ ಅಕ್ಷರದ ಮೇಲೆ ಸೊಳ್ಳೆ ಕುಳಿತಿದ್ದು ಟೈಪ್ ಮಾಡುತ್ತಿರುವಂತೆ ಕಂಡಿದೆ. ಇದನ್ನು ಹಾಸ್ಯ ಪ್ರಜ್ಞೆಯಿಂದ ನೋಡಿದ ಇಂಟರ್ನೆಟ್ ಬಳಕೆದಾರ ‘ಈ ಟ್ವೀಟನ್ನು ಸೊಳ್ಳೆ ಕಳಿಸಿದೆ’ ಎಂದು ಪೋಸ್ಟ್ ಮಾಡಿದ್ದಾರೆ.

ಮೇ 8 ರಂದು ಆನ್‌ಲೈನ್‌ನಲ್ಲಿ ಹಂಚಿಕೊಂಡ ಈ ಫೋಟೋ ವೈರಲ್ ಆಗಿದೆ. ಟ್ವಿಟರ್ ನಲ್ಲಿ 3.1 ಮಿಲಿಯನ್ ಜನರ ಗಮನ ಸೆಳೆದಿದೆ.

Font Awesome Icons

Leave a Reply

Your email address will not be published. Required fields are marked *