ಹೃದಯಾಘಾತದ ಆತಂಕ ಹೆಚ್ಚಳ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ನವದೆಹಲಿ: ಇಂದು ಶಬ್ದ ಮಾಲಿನ್ಯ ಮಾತ್ರವಲ್ಲದೆ ಪ್ರತಿಯೊಂದು ಮಾಲಿನ್ಯವು ಪರಿಸರದ ಗುಣಮಟ್ಟಕ್ಕೆ ಮಾತ್ರವಲ್ಲದೆ ಮನುಷ್ಯನ ಜೀವನಕ್ಕೂ ಗಂಭೀರ ಅಪಾಯವಾಗಿದೆ. ಶಬ್ದ ಮಾಲಿನ್ಯವು ಪ್ರಕೃತಿ ಮತ್ತು ಪರಿಸರಕ್ಕೆ ಮಾತ್ರವಲ್ಲದ ಮಾನವನಿಗೂ ಗಂಭೀರ ಹಾನಿಯನ್ನುಂಟುಮಾಡುತ್ತದೆ.

ಅಂತರಾಷ್ಟ್ರೀಯ ಸಂಶೋಧಕರ ತಂಡವು ಸಾಂಕ್ರಾಮಿಕ ರೋಗಶಾಸ್ತ್ರದ ಡೇಟಾವನ್ನು ಪರಿಶೀಲಿಸಿ, ನಿರ್ದಿಷ್ಟ ಕಾಯಿಲೆಗೆ ಅಪಾಯಕಾರಿ ಅಂಶಗಳನ್ನು ಗುರುತಿಸಲು ಪುರಾವೆಗಳನ್ನು ಒದಗಿಸಿದೆ.

ಇದು  ಮಧುಮೇಹ ಮತ್ತು ಹೃದಯಾಘಾತ ಸೇರಿದಂತೆ ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಶೇಕಡಾ 3.2 ರಷ್ಟು ಹೆಚ್ಚು ಮಾಡುತ್ತಿದೆ.

ಶಬ್ದದ ಮಟ್ಟ ಹೆಚ್ಚಾದರೆ ಶ್ರವಣ ಶಕ್ತಿ ಕಡಿಮೆಯಾಗುತ್ತದೆ. ಮಾನಸಿಕ ಒತ್ತಡ ಉಂಟಾಗುತ್ತದೆ. ಮೇಲಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಶಬ್ದದಿಂದ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚುತ್ತಿದೆ ಎಂಬುದು ಇತ್ತೀಚಿನ ಅಧ್ಯಯನದಲ್ಲಿ ಸಾಬೀತಾಗಿದೆ.

ರಾತ್ರಿ-ಸಮಯದ ಟ್ರಾಫಿಕ್ ಶಬ್ದವು ನಿದ್ರೆಯ ಸಮಯವನ್ನು ಅಡ್ಡಿಪಡಿಸುತ್ತದೆ ಮತ್ತು ಕಡಿಮೆಗೊಳಿಸುತ್ತದೆ. ಇದು ರಕ್ತನಾಳಗಳಲ್ಲಿ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಉರಿಯತ, ಅಧಿಕ ರಕ್ತದೊತ್ತಡ ಕಾಯಿಲೆಗಳನ್ನು ಉತ್ತೇಜಿಸುತ್ತದೆ.

‘ಪ್ರಬಲ ಪುರಾವೆಗಳ ಕಾರಣದಿಂದಾಗಿ ಟ್ರಾಫಿಕ್ ಶಬ್ದವು ಈಗ ಅಂತಿಮವಾಗಿ ಹೃದಯರಕ್ತನಾಳದ ಕಾಯಿಲೆಗೆ ಅಪಾಯಕಾರಿ ಅಂಶವೆಂದು ಗುರುತಿಸಲ್ಪಟ್ಟಿದೆ” ಎಂದು ಜರ್ಮನಿಯ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಮೈಂಜ್‌ನ ಹಿರಿಯ ಪ್ರಾಧ್ಯಾಪಕ ಮತ್ತು ಅಧ್ಯಯನದ ಪ್ರಮುಖ ಲೇಖಕ ಥಾಮಸ್ ಎಂಜಿಲ್ ಹೇಳಿದ್ದಾರೆ. ಸರ್ಕ್ಯುಲೇಷನ್ ರಿಸರ್ಚ್ ಜರ್ನಲ್ ಹೇಳಿದೆ.

ಸಂಶೋಧಕರು ಸ್ಥಳೀಯ ಅಧಿಕಾರಿಗಳಿಗೆ ರಸ್ತೆ, ರೈಲು ಮತ್ತು ವಾಯು ಸಂಚಾರದಿಂದ ಶಬ್ದವನ್ನು ತಗ್ಗಿಸಲು ತಂತ್ರಗಳನ್ನು ಸೂಚಿಸಿದ್ದಾರೆ.

1) ಜನನಿಬಿಡ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಶಬ್ದ ತಡೆಗಳನ್ನು ನಿರ್ಮಿಸುವುದರಿಂದ ಶಬ್ದದ ಮಟ್ಟವನ್ನು 10 ಡೆಸಿಬಲ್‌ಗಳವರೆಗೆ ಗಮನಾರ್ಹವಾಗಿ ಕಡಿಮೆ ಮಾಡಬಹುದು.

2) ಶಬ್ದ-ಕಡಿಮೆಗೊಳಿಸುವ ಡಾಂಬರು ಬಳಸಿ ರಸ್ತೆಗಳನ್ನು ನಿರ್ಮಿಸುವುದು.

3) ನಗರ ರಸ್ತೆ ಟ್ರಾಫಿಕ್ ಶಬ್ಬವನ್ನು ಕಡಿಮೆ ಮಾಡಲು ಬೈಸಿಕಲ್ ಸವಾರಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಶಿಪಾರಸ್ಸು ಮಾಡಬೇಕು.

4) ಚಾಲನೆಯ ವೇಗವನ್ನು ಸೀಮಿತಗೊಳಿಸುವುದು ಮತ್ತು ಕಡಿಮೆ ಶಬ್ದದ ಟೈರ್ಗಗಳ ಬಳಕೆಯನ್ನು ಅಭಿವೃುದ್ಧಿಪಡಿಸುವುದು ಮತ್ತು ಉತ್ತೇಜಿಸುವುದು.

Font Awesome Icons

Leave a Reply

Your email address will not be published. Required fields are marked *