ಹೆಗ್ಡೆ ಆರೋಪ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಚಿಕ್ಕಮಗಳೂರು:  ವಿದೇಶಗಳಿಂದ ಅನಧಿಕೃತವಾಗಿ ಅಡಿಕೆ ಆಮದಿನಿಂದ ದೇಶೀಯ ಅಡಿಕೆ ಬೆಳೆಗಾರರ ಬದುಕು ತೀವ್ರ ಸಂಕಷ್ಟಕ್ಕೆ ದೂಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಕಳಸಾಪುರ ಹಾಗೂ ಸಿಂದಿಗೆರೆ ಗ್ರಾಮಗಳಿಗೆ ಲೋಕಸಭಾ ಚುನಾವಣಾ ಸಂಬಂಧ ಪ್ರಚಾರ ಕೈಗೊಂಡು ಮಾತನಾಡಿದ ಅವರು ಅಧಿಕೃತವಾಗಿ ಭೂತಾನ್ ಹಾಗೂ ಶ್ರೀಲಂಕಾದಿಂದ ಲಕ್ಷಟನ್ ಅಡಿಕೆ ಆಮದಾ ಗುತ್ತಿದೆ. ಜೊತೆಗೆ ಅನಧಿಕೃತವಾಗಿ ಇನ್ನಷ್ಟು ದೇಶಗಳಿಂದ ಅಡಿಕೆ ರಫ್ತಾಗುತ್ತಿದೆ ಎಂದು ದೂರಿದರು.

ಸಂಸದರಾಗಿ ತಾವು ಕಾರ್ಯನಿರ್ವಹಿಸಿದ ಸಮಯದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸಲು ಹಾ ಗೂ ಬೆಂಬಲ ಬೆಲೆ ದೊರಕಿಸುವ ನಿಟ್ಟಿನಲ್ಲಿ ಅಡಿಕೆ ಬೆಳೆಯ ಅಧ್ಯಯನ ನಡೆಸಿ ಗೋರಕ್‌ಸಿಂಗ್ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಹಾಲಿ ಸಂಸದರು ಹತ್ತು ವರ್ಷದಲ್ಲಿ ಅಧಿಕಾರ ನಡೆಸಿದರೂ ಅನುಷ್ಟಾನಗೊಳಿಸು ವಲ್ಲಿ ವಿಫಲತೆ ತೋರಿದ್ದಾರೆ ಎಂದರು.

ಲೋಕಸಭಾ ಸದಸ್ಯರು ಬೆಳೆಗಾರರ ಸಮಸ್ಯೆ ಬಗೆಹರಿಸುವುದು ಮೂಲಕರ್ತವ್ಯ. ತಾವು ಕಳೆದ ಇಪ್ಪತ್ತು ತಿಂಗಳ ಅವಧಿಯಲ್ಲಿ ಚಿಕ್ಕಮಗಳೂರಿಗೆ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಾಗಿತ್ತು. ಅಂದು ಒಂದೇ ರೈಲು ಸಂಚರಿ ಸಿತ್ತು. ಹದಿಮೂರು ವರ್ಷಗಳ ಬಳಿಕ ಇಂದಿಗೂ ಒಂದೇ ರೈಲು ಸಂಚರಿಸುತ್ತಿದೆ ಎಂದು ಹೇಳಿದರು.

ಹಾಲಿ ಸಂಸದರು ಅಂದಿನಿಂದ ಕೇವಲ ಹೇಳಿಕೆ ಕೊಡುವುದು ಬಿಟ್ಟರೇ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿಲ್ಲ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಲೀಟರ್‌ಗೆ ೩೫ ರೂ. ಪೆಟ್ರೋಲ್ ಕೊಡು ತ್ತೇವೆಂದು ಹೇಳಿ ೧೦೪ ರೂ. ಆಗಿದೆ. ಯುಪಿಎ ಸರ್ಕಾರದಲ್ಲಿ ೫೪ ರೂ. ಪೆಟ್ರೋಲ್ ಬೆಲೆಯಿದ್ದು ಕಚ್ಚಾತೈಲ ಬೆಲೆ ಹೆಚ್ಚಿತ್ತು. ಆದರೆ ಎನ್‌ಡಿಎ ಅಧಿಕಾರದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಿದ್ದರೂ ಪೆಟ್ರೋಲ್ ಏರಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಪೆಟ್ರೋಲ್ ಸೇರಿದಂತೆ ದಿನೋಪಯೋಗಿ ವಸ್ತುಗಳ ಬೆಲೆಏರಿಸಿರುವ ಪರಿಣಾಮ ಜನಸಾಮಾನ್ಯರ ಬದುಕು ದುಸ್ತರಗೊಂಡಿದೆ. ರೈತರು ಬೆಳೆಗೆ ಪರಿಹಾರವು ನೀಡದೇ, ಸಂಕಷ್ಟಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರದ ನಡೆಯಿಂದ ಹಲವಾರು ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಿದೆ. ಆ ನಿಟ್ಟಿನಲ್ಲಿ ರೈತಾಪಿ ವರ್ಗಕ್ಕೆ ಸ್ಪಂದಿಸುವ ಪಕ್ಷವನ್ನು ಆಯ್ಕೆ ಮಾಡುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಬಡವರು, ದೀನದಲಿತರು ಹಾಗೂ ಅಲ್ಪಸಂಖ್ಯಾತರ ಭಾವನೆಗಳು, ಮನಸ್ಸನ್ನು ಕೆರಳಿಸಿ ಮತಕೇಳುವ ಸಂಸ್ಕೃತಿ ಬಿಜೆಪಿಯದು. ಬಡವರ ಜೀವನಾಭಿವೃದ್ದಿಯನ್ನು ಯೋಚಿಸಿ, ಆರ್ಥಿಕವಾಗಿ ಮೇಲೆತ್ತುವ ವಿಚಾರವನ್ನುಟ್ಟುಕೊಂಡು ಮತ ಕೇಳುವ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.

ಕೇಂದ್ರ ಸರ್ಕಾರ ಕೇವಲ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿವೆ. ಬಿಎಸ್‌ಎನ್‌ಎಲ್, ಬ್ಯಾಂಕ್‌ಗಳು ಸೇರಿದಂತೆ ಅನೇಕ ಸರ್ಕಾರಿ ಸೌಮ್ಯತೆ ಸಂಸ್ಥೆಗಳನ್ನು ಮುಳುಗಿಸಿ ಖಾಸಗೀಕರಣಗೊಳಿಸಿದೆ. ರಾಜ್ಯದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ೧೬೦ರ ಪೈಕಿ ೧೫೭ ಭರವಸೆಗಳನ್ನು ಈಡೇರಿಸಿತ್ತು. ಇದೀಗ ೫ ಗ್ಯಾರಂಟಿಗಳನ್ನು ಕೆಲವೇ ತಿಂಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿದೆ ವಿಶ್ವಾಸಗಳಿಸಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿರುವ ಮಾಜಿ ಶಾಸಕರು ಸ್ವಅಭಿವೃದ್ದಿ ಹೊಂದಿದ್ದಾರೆ ಹೊರತು ಕ್ಷೇತ್ರದ ಅಭಿವೃದ್ದಿ ಕಡೆಗಣಿಸಿ ದ್ದಾರೆ. ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸದೇ ಗುತ್ತಿಗೆದಾರರಾಗಿ ಮಾಜಿ ಶಾಸಕರು ಕಾರ್ಯನಿರ್ವಹಿಸಿದ್ದಾರೆ ಎಂದು ದೂರಿದರು.

ಕಳಸಾಪುರ, ಸಿಂದಿಗೆರೆ, ಲಕ್ಯಾ ಸೇರಿದಂತೆ ಹಲವಾರು ಪಂಚಾಯಿತಿಗಳಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಂ ಡಿರುವುದು ಕಾಂಗ್ರೆಸ್ ಅವಧಿಯಲ್ಲಿ. ಬಸ್‌ನಿಲ್ದಾಣ, ರಸ್ತೆ, ಕುಡಿಯುವ ನೀರು, ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿರುವುದು ಕಾಂಗ್ರೆಸ್ ಎಂದ ಅವರು ಹಿಂದೆ ಜಿಲ್ಲೆಯಲ್ಲಿ ಅಧಿಕಾರ ಇರದಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಅನುದಾನ ನೀಡಿರುವುದು ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ರಾಜ್ಯ ಕೃಷಿ ಸಂಸ್ಕರಣಾ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ, ಮುಖಂಡರುಗಳಾದ ಮಹಡಿಮನೆ ಸತೀಶ್, ಕೆ.ವಿ.ಮಂಜುನಾಥ್, ಕೆಂಗೇಔಡ, ಶಂಕರನಾಯ್ಕ್, ತಿಮ್ಮೇಗೌಡ, ಅಚ್ಯುತ್‌ರಾವ್, ಸಂತೋಷ್ ಲಕ್ಯಾ, ಹೊನ್ನಾಬೋವಿ ಮತ್ತಿತರರಿದ್ದರು.

Font Awesome Icons

Leave a Reply

Your email address will not be published. Required fields are marked *